ಅಮರಾವತಿ : ಆಂಧ್ರಪ್ರದೇಶದ ಓಂಗೋಲ್ ತಳಿಯ ಹಸು, ಬ್ರೆಜಿಲ್‌ನಲ್ಲಿ 41 ಕೋಟಿ ರೂ.ಗೆ ಹರಾಜಾಗಿದ್ದು, ಈ ಹಸು ಜಗತ್ತಿನ ಅತ್ಯಂತ ದುಬಾರಿ ಹಸು ಎಂಬ ಖ್ಯಾತಿ ಪಡೆದಿದೆ. ಓಂಗೋಲ್ ಹಸುಗಳಿಗೆ ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಬೇಡಿಕೆ ಇರಲಿಲ್ಲ, ಆದರೆ ಇದೀಗ ಬ್ರೆಜಿಲ್‌ನಲ್ಲಿ ಈ ಹಸು 41 ಕೋಟಿಗೆ ಹರಾಜಾಗಿರುವುದು ಇತಿಹಾಸವನ್ನೇ ಸೃಷ್ಟಿಸಿದೆ.
ಈ ಹಸುಗೆ ಬ್ರೆಜಿಲ್‌ನಲ್ಲಿ “ವಿಯೆಟ್ನಾ-19” ಎಂಬ ಹೆಸರಿಡಲಾಗಿದೆ. 2023 ರಲ್ಲಿ ಬ್ರೆಜಿಲ್‌ನ ಹರಾಜಿನಲ್ಲಿ ವಿಯೆಟ್ನಾ-19 ತಳಿಯ ಹಸು 37 ಕೋಟಿಗೆ ಮಾರಾಟವಾಗಿತ್ತು, ಆದರೆ ಇದೀಗ ಅದರ ಬೆಲೆ 41 ಕೋಟಿಗೆ ಏರಿಕೆಗೊಂಡಿದೆ. ಇದು ಜಪಾನ್‌ನ ಪ್ರಸಿದ್ಧ ವಾಗ್ಯು ಮತ್ತು ಭಾರತದ ಬ್ರಾಹ್ಮಣ ತಳಿಗಳನ್ನೂ ಹಿಂದಿಕ್ಕಿದೆ.
ಓಂಗೋಲ್ ಹಸುಗಳು ಮೂಲತಃ ಆಂಧ್ರಪ್ರದೇಶದ ಪ್ರಕಾಶಂನಿಂದ ಬರುತ್ತವೆ. ಈ ಹಸುಗಳು ವಿಶಿಷ್ಟ ಅನುವಂಶೀಯ ಲಕ್ಷಣ, ಶಕ್ತಿ, ಉತ್ತಮ ಸ್ನಾಯುಗಳ ರಚನೆಗಾಗಿ ಪ್ರಸಿದ್ಧವಾಗಿದೆ.