ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕು ದಿನಗಳಷ್ಟೆ ಬಾಕಿ ಉಳಿದಿವೆ. ಹಲವು ರಾಜ್ಯಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ನಿನ್ನೆ ಓಪನ್ ಆಗಿದೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಅಮೆರಿಕ ಇನ್ನಿತರೆ ಕಡೆಗಳಲ್ಲಿ ನಿನ್ನೆಯೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಕೇವಲ ಒಂದೇ ದಿನದಲ್ಲಿ ದಾಖಲೆ ಮೊತ್ತದ ಟಿಕೆಟ್ಗಳು ಮುಂಗಡವಾಗಿ ಬುಕ್ ಆಗಿವೆ. “Book my show” ನಲ್ಲಿ ಬುಕಿಂಗ್ ಆರಂಭವಾಗಿದೆ. ಇನ್ನು ಅಪ್ಸರಾ, ಸುಧಾ, ಸಿನಿಪೋಲೋಸ್, ಲಕ್ಷ್ಮಿ ಸಿಟಿ ಪ್ರೈಡ್ ಸೇರಿದಂತೆ ಹುಬ್ಬಳ್ಳಿಯ ಚಿತ್ರಮಂದಿರಗಳಲ್ಲಿ ಇಂದಿನಿಂದ ಅಡ್ವಾನ್ಸ್ ಬುಕಿಂಗ್ ಶುರುವಾಗಿದ್ದು, ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ತಾ ಇದೆ. ಟಿಕೆಟ್ ಬುಕಿಂಗ್ ವೇಗ ನೋಡಿದರೆ ‘ಪುಷ್ಪ 2’ ಸಿನಿಮಾ ಹೊಸ ದಾಖಲೆ ನಿರ್ಮಿಸುವತ್ತ ಸಾಗಿದೆ.
