ಆಪರೇಷನ್ ಸಿಂದೂರ್ ಬಗ್ಗೆ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಇನ್‌ಸ್ಟಾಗ್ರಾಮ್ ಇನ್ಸುಯೆನ್ಸರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶರ್ಮಿಷ್ಠಾ ಪನೋಲಿ ಅವರನ್ನು ಶನಿವಾರ ಹರಿಯಾಣದ ಗುರುಗ್ರಾಮದಿಂದ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಪುಣೆಯ ಕಾನೂನು ವಿಶ್ವವಿದ್ಯಾಲಯದಲ್ಲಿ ದಾಖಲಾಗಿರುವ ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ವೀಡಿಯೊವೊಂದನ್ನು ಮಾಡಿದ್ದು, ಅದರಲ್ಲಿ ಹಲವಾರು ಹಿಂದಿ ಚಲನಚಿತ್ರ ನಟರು ಆಪರೇಷನ್ ಸಿಂದೂರ್ ಕುರಿತು ಮಾತನಾಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಆಕ್ರೋಶವನ್ನು ಹುಟ್ಟುಹಾಕಿತು.
ತೀವ್ರ ಟೀಕೆಗೆ ಗುರಿಯಾದ ಶರ್ಮಿಷ್ಠಾ ಪನೋಲಿ ತಮ್ಮ ಖಾತೆಯಿಂದ ವೀಡಿಯೊವನ್ನು ಅಳಿಸಿಹಾಕಿ ಕ್ಷಮೆಯಾಚಿಸಿದರು. ಆದರೆ ಕೊಲ್ಕತ್ತಾದ ಪೊಲೀಸರು ಶರ್ಮಿಷ್ಠಾ ಪನೋಲಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ನಂತರ ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಕಾನೂನು ನೋಟಿಸ್‌ಗಳನ್ನು ಜಾರಿಗೊಳಿಸಲಾಯಿತು. ಕಾನೂನು ನೋಟಿಸ್ ಅನ್ನು ತಲುಪಿಸಲು ಸಾಧ್ಯವಾಗದ ಕಾರಣ, ಕೋಲ್ಕತ್ತಾ ಪೊಲೀಸರು ಈ ವಿಷಯವನ್ನು ನ್ಯಾಯಾಲಯದ ಮುಂದೆ ಇಟ್ಟರು. ನಂತರ ಆಕೆಯ ವಿರುದ್ಧ ಬಂಧನದ ವಾರಂಟ್ ಹೊರಡಿಸಲಾಯಿತು.
				
															
                    
                    
                    
                    
                    

































