ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 29 ರಂದು 3 ಗಂಟೆಯವರೆಗೆ ದೂರುದಾರನ ಸಮ್ಮುಖದಲ್ಲಿ ಎಸ್.ಐ.ಟಿ ತನಿಖೆ ವೇಳೆ ಮೊದಲ ಗುಂಡಿಯನ್ನು ಕಾರ್ಮಿಕರಿಂದ ಮಣ್ಣು ತೆಗೆಸಿದ್ದು ಇದರಲ್ಲಿ ಈವರೆಗೆ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ.
ಮುಂದಿನ ಕಾರ್ಯಾಚರಣೆ ಜೆಸಿಬಿ ಮೂಲಕ ಮಾಡಲಾಗುತ್ತದೆ. ಈ ಪ್ರಕರಣ ತುಂಬಾ ಗಂಭೀರವಾಗಿದ್ದು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಐಪಿಎಸ್ ಅನುಚೇತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.