ಬೆಂಗಳೂರು: ಕುಂದಾನಗರಿ ಬೆಳಗಾವಿಯಲ್ಲಿ ಇಂದಿನಿಂದ ಡಿಸೆಂಬರ್ 19 ವರೆಗೆ ಅಂದ್ರೆ 10 ದಿನಗಳ ಕಾಲ ಸುವರ್ಣಸೌಧದಲ್ಲಿ ಚಳಿಗಾಲದಲ್ಲಿ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ 15 ವಿಧೇಯಕಗಳ ಮಂಡನೆಯಾಗಲಿದೆ.
ಇನ್ನು ಈ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ವಿರುದ್ಧ ಮುಗಿಬಿಳಲು ಬಿಜೆಪಿ, ಜೆಡಿಎಸ್ ಸಜ್ಜಾಗಿವೆ. ವಕ್ಫ್ ಬೋರ್ಡ್ ರೈತರಿಗೆ ನೋಟಿಸ್ ಕೊಟ್ಟ ವಿಚಾರವನ್ನ ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬಿಳೋದ ನಿಶ್ಚಿತವಾಗಿದೆ. ಈ ವಿಚಾರದಲ್ಲಿ ಸಚಿವ ಜಮೀರ್ ರಾಜೀನಾಮೆ ಹಾಗೂ ವಕ್ಫ್ ಗೆಜೆಟ್ ನೊಟಿಫಿಕೇಷನ್ ರದ್ದತಿಗೆ ಆಗ್ರಹಿಸಿ ವಿಪಕ್ಷಗಳು ಪಟ್ಟು ಹಿಡಿಯುವ ಸಾಧ್ಯತೆ ಇದೆ.
ಇನ್ನೊಂದು ಪ್ರಮುಖವಾಗಿ ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣವನ್ನ ಪ್ರಸ್ತಾಪಿಸಿ ಸರ್ಕಾರವನ್ನ ಇಕ್ಕಿಟ್ಟಿಗೆ ಸಿಲುಕಿಸಲು ವಿಪಕ್ಷಗಳು ನಿರ್ಧರಿಸಿದೆ. ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದಲ್ಲಿ ಸರ್ಕಾರದ ವೈಫಲ್ಯತೆ ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ಹಾಗೂ ಪ್ರಕರಣದ ನ್ಯಾಯಾಂಗ ತನಿಖೆಗೆ ವಿಪಕ್ಷಗಳು ಆಗ್ರಹಿಸಲಿದೆ. ಇದ್ರ ಜೊತೆಗೆ ಸಿಎಂ ಸಿದ್ದರಾಮಯ್ಯ ಮೇಲೆ ಬಂದಿರುವ ಮುಡಾ ಹಗರಣದ ಬಗ್ಗೆ ಈ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನ ಕಟ್ಟಿಹಾಕಲಿವೆ ವಿಪಕ್ಷಗಳು. ಮಳೆಗಾಲದ ಅಧಿವೇಶನದಲ್ಲಿ ಭಾರೀ ಜಟಾಪಟಿ ಸೃಷ್ಟಿಯಾಗಿತ್ತು.
ಈಗ ಬೆಳಗಾವಿ ಸದನದಲ್ಲೂ ಮುಡಾ ಪ್ರಕರಣ ಪ್ರಸ್ತಾಪಿಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಲಿದ್ದಾರೆ. ಈ ಸರ್ಕಾರದ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿರುವ ಅಬಕಾರಿ ಇಲಾಖೆಯ ವಸೂಲಿ ಪ್ರಕರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿಲಿರುವ ವಿಪಕ್ಷಗಳು ಅಬಕಾರಿ ಇಲಾಖೆಯ ಹಗರಣದ ಬಗ್ಗೆ ಮಹಾರಾಷ್ಟ್ರ ಚುನಾವಣೆಯ ಪ್ರಚಾರದಲ್ಲಿ ಪಿಎಂ ಮೋದಿ ಸಹ ಪ್ರಸ್ತಾಪಿಸಿದ್ದರು. ಹೀಗಾಗಿ ಈ ಸದನದಲ್ಲಿ ಪ್ರಸ್ತಾಪಿಸಿ ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿಲಿವೆ ವಿಪಕ್ಷಗಳು. ಒಟ್ಟಾರೆ ಸದನದಲ್ಲಿ ಸರ್ಕಾರವನ್ನ ಎದುರಿಸಲು ವಿಪಕ್ಷಗಳಿಗೆ ಸಜ್ಜಾಗಿವೆ ವಿಪಕ್ಷಗಳ ಪ್ರಶ್ನೆಗೆ ಸರ್ಕಾರ ಯಾವ ರೀತಿ ಉತ್ತರಿಸಲಿದೆ ಕಾದು ನೋಡೋಣ.