ದೆಹಲಿ: ಹವಾಮಾನದಲ್ಲಿ ಉಂಟಾಗುರುತ್ತಿರುವ ನಿರಂತರ ಬದಲಾವಣೆಗಳಿಂದ ದೆಹಲಿ ಸೇರಿದಂತೆ ವಿವಿಧೆಡೆ ವ್ಯಾಪಕ ಮಳೆ ಮಾತ್ರವಲ್ಲದೇ, ಕೆಲವೆಡೆ ಚಳಿ, ದಟ್ಟ ಮಂಜು ನಿರ್ಮಾಣವಾಗುತ್ತಿದೆ.
ಸದ್ಯ IMD ಮುನ್ಸೂಚನೆ ಪ್ರಕಾರ, ‘ಮಹಾಕುಂಭ ಮೇಳ 2025’ ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಮುಂದಿನ ಕೆಲವು ದಿನ ಮಳೆ ಆವರಿಸಲಿದೆ. ಚಳಿ-ಮಂಜು ಕವಿಯಲಿದೆ. ಭಕ್ತರು ಅಗತ್ಯ ಎಚ್ಚರಿಕೆ ವಹಿಸಬೇಕಿದೆ.ಪ್ರಯಾಗ್ರಾಜ್ನ ವ್ಯಾಪ್ತಿಯಲ್ಲಿ ಮಳೆ, ಮಂಜು ಬೀಳುವ ಮುನ್ಸೂಚನೆ ಇದೆ. ಈ ಭಾಗಕ್ಕೆ ಹವಾಮಾನ ಇಲಾಖೆ ಇಂದು ಶಕ್ರವಾರ (ಜನವರಿ 17) ‘ಆರೆಂಜ್ ಅಲರ್ಟ್’ ಘೋಷಿಸಿದೆ. ಈ ಪರಿಸ್ಥಿತಿ ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಐಎಂಡಿ ವಿಜ್ಞಾನಿ ಸೋಮ ಸೇನ್ ರಾಯ್ ಮಾಹಿತಿ ನೀಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.