ಚಿತ್ರದುರ್ಗ : ಮಹಿಳೆಯರು ಅರ್ಥಿಕವಾಗಿ ಸಬಲರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ, ಇದನ್ನು ಮಾಡುವುದಕ್ಕಾಗಿ ಸಂಘಗಳನ್ನು ಸ್ಥಾಪನೆ ಮಾಡುವುದರ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ತಿಳಿಸಿದರು.
ಹೊಳಲ್ಕೆರೆ ನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ನ ವಿಕಾಸ ಸೌಧ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವನ್ನು ತೃಪ್ತಿ ಪಡಿಸಲು ಅನ್ನದಿಂದ ಮಾತ್ರ ಸಾಧ್ಯವಿದೆ ಬೇರೆ ಏನನ್ನಾದರೂ ನೀಡದರು ಸಹಾ ಇನ್ನೂ ಬೇಕು ಎನ್ನಲಾಗುತ್ತದೆ, ನಮ್ಮ ಸಂಸ್ಥೆಯವತಿಯಿಂದ ಅನ್ನದಾನ ವಿದ್ಯಾದಾನ, ಆರೋಗ್ಯ ಹಾಗೂ ಆಭಯವನ್ನು ನೀಡುವಂತ ಕಾರ್ಯವನ್ನು ಮಾಡಲಾಗುತ್ತದೆ. ಜನತೆ ಸ್ವಯಂ ಉದ್ಯೋಗಿಗಳಾಗಲು ವಿವಿಧ ರೀತಿಯ ತರಬೇತಿಯನ್ನು ನೀಡುವುದರ ಮೂಲಕ ಆವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಜನತೆ ಸ್ವಾವಲಂಬಿಗಳಾಗುವುದು ಮೂಲಕ ತಮ್ಮ ಬಡತವನ್ನು ನಿವಾರಣೆಯನ್ನು ಮಾಡಿಕೊಳ್ಳಬೇಕಿದೆ ಎಂದರು.
ಜನರಿಗೆ ಏನು ಬೇಕೆಂದರೆ ನಮಗೆ ಹಣವನ್ನು ನೀಡಿ ಸಾಕು ಎನ್ನುತ್ತಿದ್ದಾರೆ ಆದರೆ ಹಣದಿಂದ ಏನು ಮಾಡಲು ಸಾಧ್ಯವಿಲ್ಲ, ಇಂದಿನ ದಿನಮಾನದಲ್ಲಿ ನಮಗೆ ನೆಮ್ಮದಿ, ತೃಪ್ತಿ ಅಗತ್ಯವಾಗಿದೆ. ನಮ್ಮಲ್ಲಿನ ಸ್ವಸಹಾಯ ಸಂಘದ ಸದಸ್ಯರನ್ನು ತಮ್ಮ ಸಂಸ್ಥೆಯಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳಲಾಗಿದೆ ಯಾವ ಸಂಸ್ಥೆಯಲ್ಲಿಯೂ ಸಹಾ ಈ ರೀತಿ ಇಲ್ಲ, ನಾವು ಬಂಡವಾಳವನ್ನು ನೀಡುತ್ತೇವೆ ನೀವುಗಳು ಶ್ರಮವನ್ನು ಹಾಕುವುದರ ಮೂಲಕ ಉತ್ತಮವಾದ ಬದುಕನ್ನು ನಡೆಸಬೇಕಿದೆ ಎಂದರು.
ಜನ ಈ ಮುಂಚೆ ಕೃಷಿಗೆ ಭೂಮಿ, ಜಾನುವಾರು, ಸಹಾಯವನ್ನು ಕೇಳುತ್ತಿದ್ದರು ಆದರೆ ಈಗ ಹಳ್ಳಿಗಳಲ್ಲಿಯೂ ಬೈಕ್ಗಳ ಷೊ ರೂಂ ಹಾಗೂ ಬಂಗಾರದ ಅಂಗಡಿಗಳು ಬಂದಿವೆ, ಇದರಿಂದ ತಿಳಿಯುತ್ತದೆ ನಮ್ಮ ಜನತೆ ಮುಂದುವರೆದಿದ್ಧಾರೆ ಎಂದು ಅವರು, ಇಂದು ಮಹಿಳೆಯರು ಜಾಗೃತರಾಗಿದ್ದಾತರೆ ಆವರು ಅರ್ಥಿಕವಾಗಿ ಸ್ವಾವಲಂಬಿಗಳಾಗಲು ನಮ್ಮ ಸಂಸ್ಥೆ ನೆರವಾಗಿದೆ. ಅವರನ್ನು ಮನೆಯ ಆರ್ಥಿಕ ಮಂತ್ರಯನ್ನಾಗಿ ಮಾಡಲಾಗುತ್ತಿದೆ ಎಂದರು.
ಮಹಿಳೆಯರ ಮೇಲೆ ಆಪಾರವಾದ ನಂಬಿಕೆ ಇದೆ ಅವರಿಗೆ ಸಾಲವನ್ನು ನೀಡಿದರೆ ವಾಪಾಸ್ಸು ಬರುತ್ತದೆ ಎಂಬ ನಂಬಿಕೆ ಇದೆ. ಅವರು ಪಡೆದ ಸಾಲವನ್ನು ಸರಿಯಾಗಿ ಉಪಯೋಗವನ್ನು ಮಾಡುತ್ತಾರೆ ಅದೇ ರೀತಿ ವಾಪಸ್ಸು ಮಾಡುತ್ತಾರೆ ಇದರಿಂದ ನಾವು ಅಲ್ಲದೆ ಬ್ಯಾಂಕ್ಗಳು ಸಹಾ ಮಹಿಳೆಯರಿಗೆ ಸಾಲವನ್ನು ನೀಡಲು ಮುಂದಾಗಿದೆ. ನಮ್ಮಲ್ಲಿ ಸ್ವಸಹಾಯ ಸಂಘಗಳಲ್ಲಿ ಪ್ರತಿ ವರ್ಷ ರೇಟಿಂಗ್ ನೀಡಲಾಗುತ್ತದೆ ಇದರಲ್ಲಿ ಉತ್ತಮವಾಗಿ ಕೆಲಸವನ್ನು ಮಾಡುವ ಸಂಘಗಳಿಗೆ ಲಾಭಾಂಶವನ್ನು ನೀಡಲಾಗುತ್ತದೆ ಹೊಳಲ್ಕೆರೆಯಲ್ಲಿ ಇರುವ ೪೦೦೦ ಸಂಘಗಳಲ್ಲಿ ೫೦ ಸಂಘಗಳು ಪ್ರಗತಿ ಕಡಿಮೆಯಾಗಿದೆ ಇದನ್ನು ಸರಿಪಡಿಸಬೇಕಿದೆ ಎಂದು ವಿರೇಂದ್ರ ಹೆಗ್ಗಡೆ ಕರೆ ನೀಡಿದರು.
ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಪುನಶ್ವೇತನಗೊಂಡ ಕೆರೆಯ ಹಸ್ತಾಂತರ ಪ್ರಮಾಣ ಪತ್ರ ವಿತರಣೆಯನ್ನು ಮಾಡಿದ ಸಂಸದರಾದ ಗೋವಿಂದ ಎಮ್ ಕಾರಜೋಳ, ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಿ. ಸುಧಾಕರ್ ಮಾತನಾಡಿದರು. ಪುರಸಭೆಯ ಮಾಜಿ ಅಧ್ಯಕ್ಷರುಗಳಾದ ಆರ.ಎ.ಆಶೋಕ್, ಬಿ.ಎಸ್.ರುದ್ರಪ್ಪ. ಮಾಜಿ ಉಪಾಧ್ಯಕ್ಷರಾದ ಕೆ.ಸಿ.ರಮೇಶ್, ಹಾಲಿ ಉಪಾಧ್ಯಕ್ಷರಾದ ಶ್ರೀಮತಿ ನಾಗರತ್ನ, ಸದಸ್ಯರಾz ಸೈಯದ್ ಮನ್ಸೂರ್, ಮಲ್ಲಿಕಾರ್ಜನ್, ವಿಜಯ ಶ್ರೀಮತಿ ಮಮತ, ಮುರುಗೇಶ್, ಶ್ರೀಮತಿ ಶಬೀನ ಆಶ್ರಫ್ ವುಲ್ಲಾ, ಸೈಯದ್ ಸಜಿಲ್ ಶ್ರೀಪೂರ್ಣಿಮ ಶ್ರೀಮತಿ ಸುಧಾ, ಶ್ರೀಮತಿ ವಸಂತ ಮಂಜುನಾಥ್, ಬಸಬರಾಜು, ಮಜರವುಲ್ಲಾ ಜಿಲ್ಲಾ ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಮಾರುತೇಶ್ ಹಾಲಿ ಅಧ್ಯಕ್ಷರಾದ ಓಂಕಾರಪ್ಪ ಭಾಗವಹಿಸಲಿದ್ದಾರೆ. ಧರ್ಮಸ್ಥಳ ಗ್ರಾಮೀಣ ಅಭೀವೃದ್ದಿ ಬಿ.ಸಿ.ಟ್ರಸ್ಟ್ ನ ನಿರ್ದೇಶಕರಾದ ದಿನೇಶ್ ಪೂಜಾರ್ ಸ್ವಾಗತಿಸಿದರು.