ಕಲಬುರಗಿ : ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದಲ್ಲಿರುವ ಭಾಗ್ಯವಂತಿ ದೇವಿಯು ಕರ್ನಾಟಕದ ಪ್ರಸಿದ್ಧ ದೇವಾಲಯವಾಗಿದೆ.
ಭಾಗ್ಯವಂತಿ ದೇವಿಯ ಹುಂಡಿಗೆ 20 ರೂ. ನೋಟು (20 Rs. Note) ಹಾಕಲಾಗಿದೆ. ಈ ನೋಟಿನ ಮೇಲೆ ಬರದಿರುವ ವಾಕ್ಯ ಓದಿದರೆ, ನೀವು ತಲೆ ಕೆಡಿಸಿಕೊಳ್ಳುವುದು ಗ್ಯಾರಂಟಿ. ಅಂತದ್ದೇನಿದೆ ಅಂತೀರಾ.? ಈ 20 ರೂ. ನೋಟಿನ ಮೇಲಿನ ಮೇಲೆ “ನಮ್ಮ ಅತ್ತೆ (mother in law) ಬೇಗ ಸಾಯಲಿ ತಾಯಿ” ಎಂದು ಬರೆಯಲಾಗಿದೆ. ಹೀಗೆ ಸೊಸೆಯೋರ್ವಳು, “ತಾಯಿ ನಮ್ಮ ಅತ್ತೆ ಬೇಗ ಸಾಯಲಿ ತಾಯಿ” ಅಂತ 20 ರೂ. ನೋಟಿನ ಮೇಲೆ ಹರಕೆ ಹೊತ್ತು ಬರೆದು (write) ಹುಂಡಿಯಲ್ಲಿ ಕಂಡು ಬಂದಿರುವುದು ಹುಂಡಿ ಎಣಿಕೆ ವೇಳೆ ಕಂಡು ಬಂದಿದೆ.
ಈ ನೋಟು ನೋಡಿದ ಹುಂಡಿ ಎಣಿಕೆಯ ಸಿಬ್ಬಂದಿಗಳು ಒಂದು ಕ್ಷಣ ಅಚ್ಚರಿ (surprise) ಪಟ್ಟಿದ್ದಾರೆ. ಈಗ ಈ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಪ್ರತಿ ವರ್ಷ ಕಾಣಿಕೆ ಹುಂಡಿ ತೆರೆದು ಭಕ್ತರ ಕಾಣಿಕೆಯ ಎಣಿಕೆ ಮಾಡಲಾಗುತ್ತದೆ. ವಾರ್ಷಿಕ ಹುಂಡಿ ಹಣ ಎಣಿಕೆ (Annual Hundi money count) ವೇಳೆ 60 ಲಕ್ಷ ರೂ. ನಗದು, ಒಂದು ಕೆಜಿ ಬೆಳ್ಳಿ ಜಮಾ ಆಗಿದೆ ಎಂದು ತಿಳಿದು ಬಂದಿದೆ