ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆ ಒತ್ತುವರಿ ಮಾಡಿದ ಭೂಗಳ್ಳರಿಗೆ ಜಿಲ್ಲಾಡಳಿತ ಶಾಕ್ ಕೊಟ್ಟಿದೆ. ಬೆಂಗಳೂರಿನಲ್ಲಿ 4554 ಎಕರೆಯಷ್ಟು ಕೆರೆ ಜಾಗ ಒತ್ತುವರಿಯಾಗಿರುವ ಮಾಹಿತಿ ಇದ್ದು, ಗಣ್ಯರು, ಬಿಲ್ಡರ್‌ಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳಿಂದ ಕೂಡ ಕೆರೆ ಜಾಗ ಒತ್ತುವರಿಯಾಗಿದೆ.
ನಗರದ ಕೆರೆ ಒತ್ತುವರಿ ಬಗ್ಗೆ ಜಿಲ್ಲಾಡಳಿತ ಸರ್ವೇ ನಡೆಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರೆ. ಬೆಂಗಳೂರು ಉತ್ತರ ವಲಯದ ಯಲಹಂಕದಲ್ಲೇ ಹೆಚ್ಚು ಒತ್ತುವರಿಯಾಗಿದ್ದು, ನಗರದಲ್ಲಿ ಎಷ್ಟು ಕೆರೆಗಳು ಒತ್ತುವರಿ ಆಗಿದೆ ಇಲ್ಲಿದೆ ಮಾಹಿತಿ.
* ಬೆಂಗಳೂರು ಉತ್ತರ-123 ಕೆರೆಯಲ್ಲಿ -1183 ಎಕರೆ ಜಾಗ ಒತ್ತುವರಿ..
* ಬೆಂಗಳೂರು ದಕ್ಷಿಣ-179 ಕೆರೆಯಲ್ಲಿ 825 ಎಕರೆ ಜಾಗ ಒತ್ತುವರಿ..
* ಆನೇಕಲ್-223 ಕೆರೆಯಲ್ಲಿ- 719 ಎಕರೆ ಜಾಗ ಒತ್ತುವರಿ .
* ಬೆಂಗಳೂರು ಪೂರ್ವ-100 ಕೆರೆಗಳಲ್ಲಿ-667 ಎಕರೆ ಜಾಗ ಒತ್ತುವರಿ
* ಯಲಹಂಕ-105 ಕೆರೆಯಲ್ಲಿ-1147 ಎಕರೆ ಜಾಗ ಒತ್ತುವರಿ ನಗರದಲ್ಲಿ ಒಟ್ಟು 837 ಕೆರೆಗಳಲ್ಲಿ 730 ಕರೆಗಳು ಒತ್ತುವರಿಯಾಗಿದ್ದು,
ಸದ್ಯ ಪಾಲಿಕೆ ಹಾಗೂ ಜಿಲ್ಲಾಡಳಿತ ದಿಂದ ಒತ್ತುವರಿ ತೆರವಿಗೆ ಮುಂದಾಗಿದೆ.