ಎರಡು ದಿನಗಳ ಹಿಂದೆ ಪಾಕಿಸ್ತಾನ ಗಡಿಯನ್ನು ಅಕಸ್ಮಾತ್ ಪ್ರವೇಶಿಸಿದ್ದಂತ ಭಾರತೀಯ ಯೋಧ ಪಿ.ಕೆ ಸಿಂಗ್ ಅನ್ನು ಪಾಕಿಸ್ತಾನ ರೇಂಜರ್ಸ್ ಬಂಧಿಸಿದ್ದರು. ಸದ್ಯ ಅವರ ಬಿಡುಗಡೆಗೆ ಪಾಕಿಸ್ತಾನ ನಕಾರ ಮಾಡ್ತಿದೆ.
ಅಂತಾರಾಷ್ಟ್ರೀಯ ಗಡಿ ರೇಖೆ ದಾಟಿ ಪಾಕ್ ನೊಳಗೆ ಪ್ರವೇಶವನ್ನು ಭಾರತೀಯ ಯೋಧ ಪಿ.ಕೆ ಸಿಂಗ್ ಮಾಡಿದ್ದರು. ಈ ವೇಳೆ ಪಾಕ್ ಯೋಧರು ಅವರನ್ನು ವಶಕ್ಕೆ ಪೆಡದಿದ್ದರು. ಮತ್ತೊಂದೆಡೆ ಪಾಕಿಗಳ ಕೈಯಲ್ಲಿ ಸೆರೆಯಾಗಿರುವ ಭಾರತೀಯ ಜವಾನನನ್ನು ಪಾಕಿಸ್ತಾನ ಮಾಧ್ಯಮಗಳಲ್ಲಿ ತಮ್ಮ ಪ್ರಚಾರಕ್ಕಾಗಿ ಬಳಸುತ್ತಿದೆ. ಆಕಸ್ಮಿಕವಾಗಿ ಪಂಜಾಬ್ ಗಡಿ ದಾಟಿದ ಗಡಿ ಭದ್ರತಾ ಪಡೆ ಜವಾನ ಪಿಕೆ ಸಿಂಗ್ ಅವರನ್ನು ಪಾಕಿಸ್ತಾನದ ರೇಂಜರ್‌ಗಳು ಬಂಧಿಸಿದ್ದಾರೆ.
ಈ ಹಿನ್ನೆಲೆ ಜಿನಿವಾ ಒಪ್ಪಂದ ಮತ್ತೆ ಮುನ್ನೆಲೆಗೆ ಬಂದಿದೆ. ಗಾಯಗೊಂಡ ಸೈನಿಕರು, ಯುದ್ಧ ಭೂಮಿಯ ಸುತ್ತಮುತ್ತ ಸೆರೆ ಸಿಕ್ಕ ಜನರ ಹಕ್ಕುಗಳ ರಕ್ಷಣೆ ಬಗ್ಗೆ ಹಲವು ಮಾರ್ಗಸೂಚಿಗಳನ್ನು ಈ ಒಪ್ಪಂದ ಒಳಗೊಂಡಿದೆ. ಜಿನೀವಾ ಒಪ್ಪಂದದ ಪ್ರಕಾರ ಗಾಯಗೊಂಡ ಸೈನಿಕ ಸೆರೆ ಸಿಕ್ಕರೆ ಆತನನ್ನು ಹಿಂಸಿಸುವುದು ಅಥವಾ ಹತ್ಯೆ ಮಾಡುವುದು ನಿಷೇಧ. ಆತನ ಧರ್ಮ, ಬಣ್ಣ, ಲಿಂಗ ಬೇಧವಿಲ್ಲದೆ ಚಿಕಿತ್ಸೆ ನೀಡಬೇಕು. ಸೂಕ್ತ ಆಹಾರ, ಆಶ್ರಯ ನೀಡಬೇಕು.
ಆದರೂ ಪಾಕಿಸ್ತಾನ ಯೋಧನನ್ನು ಹಸ್ತಾಂತರಿಸಲು ನಿರಾಕರಿಸುತ್ತಿದೆ ಎನ್ನಲಾಗಿದೆ.