ನವದೆಹಲಿ: ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಸಂಪೂರ್ಣವಾಗಿ ಹಾಳಾಗಿದೆ. ಉಗ್ರರ ದಾಳಿಯ ನಂತರ ಪಾಕಿಸ್ತಾನಿ ಪ್ರಜೆಗಳನ್ನು ಭಾರತ ಬಿಟ್ಟು ಸ್ವದೇಶಕ್ಕೆ ಮರಳುವಂತೆ ಆದೇಶಿಸಿದ್ದಂತ ಭಾರತವು, ಆ ಬಳಿಕ ಪಾಕಿಸ್ತಾನದ ಯ್ಯೂಟ್ಯೂಬ್ ಚಾನಲ್ ಗಳನ್ನು ನಿಷೇಧಿಸಿತ್ತು. ಇದೀಗ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಯೂಟ್ಯೂಬ್ ಚಾಲನ್ ಸ್ಥಗಿತಗೊಳಿಸಿ ಆದೇಶಿಸಿದೆ. ಈಗಾಗಲೇ ಭಾರತ ಪಾಕಿಸ್ತಾನದ ಕೆಲ ನ್ಯೂಸ್ ಚಾನೆಲ್ಗಳು ಸೇರಿದಂತೆ ಹಲವು ಯೂಟ್ಯೂಬ್ ಚಾನೆಲ್ಗಳನ್ನು ನಿಷೇಧಿಸಿದೆ.
ಈಗಾಗಲೇ ಪಾಕಿಸ್ತಾನದ ಹಲವು ನಟ ನಟಿಯರ ಇನ್ಸ್ಟಾಗ್ರಾಂ ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಮಹಿರಾ ಖಾನ್, ಹನಿಯಾ ಆಮಿರ್ (Hania Amir) ಮತ್ತು ಅಲಿ ಜಾಫರ್ ಸೇರಿದಂತೆ ಜನಪ್ರಿಯ ಪಾಕಿಸ್ತಾನಿ ಕಲಾವಿದರ ಇನ್ಸ್ಟಾಗ್ರಾಮ್ ಖಾತೆಗಳನ್ನು ಬುಧವಾರ ಸಂಜೆ ಭಾರತದಲ್ಲಿ ನಿರ್ಬಂಧಿಸಲಾಗಿದೆ. ಕಿಸ್ತಾನಿ ಡ್ರಾಮಾಗಳಾದ “ಮೇರೆ ಹಮ್ಸಫರ್” ಮತ್ತು “ಕಭಿ ಮೇ ಕಭಿ ತುಮ್” ಗಳಿಂದ ಭಾರತೀಯ ಅಭಿಮಾನಿಗಳಲ್ಲಿ ಜನಪ್ರಿಯರಾಗಿರುವ ನಟಿ ಹಾನಿಯಾ ಅಮಿರ್ ಪಹಲ್ಗಾಮ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿ, ಇಂತಹ ಘಟನೆಗಳು ಎಲ್ಲಿ ನಡೆದರೂ ಅದು ದುರಂತವೇ ಎಂದು ಹೇಳಿದ್ದರು. ದಿಲ್ಜಿತ್ ದೋಸಾಂಜಾ ಅವರ ಮುಂದಿನ ಹಾಡಿನಲ್ಲಿ ಹಾನಿಯಾ ಕಾಣಿಸಿಕೊಳ್ಳುವವರಿದ್ದರು. ಆದರೆ ದಾಳಿ ಬಳಿಕ ಅವರನ್ನು ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ಮತ್ತೊಬ್ಬ ಪಾಕಿಸ್ತಾನಿ ಜನಪ್ರಿಯ ನಟಿ ಮಹಿರಾ ಖಾನ್ ಶಾರುಕ್ ಖಾನ್ ಅವರ ಜೊತೆ ಬಣ್ಣ ಹಚ್ಚಿದ್ದರು. ಓ ಝಾಲಿಮಾ ಹಾಡಿನಲ್ಲಿ ಮಹಿರಾ ಭಾರತೀಯ ಮನ ಗೆದ್ದಿದ್ದರು. ಇದೀಗ ಅವರ ಇನಸ್ಟಾಗ್ರಾಂ ಖಾತೆ ಕೂಡ ಭಾರತದಲ್ಲಿ ಬ್ಯಾನ್ ಆಗಿದೆ. ಆದಾಗ್ಯೂ, ಫವಾದ್ ಖಾನ್ , ಮೌರಾ ಹೊಕೇನ್ ಮತ್ತು ಗಾಯಕ ಅತಿಫ್ ಅಸ್ಲಾಮ್ರಂತಹ ತಾರೆಯರ ಪ್ರೊಫೈಲ್ಗಳು ಭಾರತೀಯ ಬಳಕೆದಾರರಿಗೆ ಕಾಣಿಸುತ್ತಿದೆ. ಶೆಹಬಾಜ್ ಷರೀಫ್ ಅವರ ಚಾನೆಲ್ ಜೊತೆಗೆ, ಹಮ್ ಟಿವಿ ಮತ್ತು ಎಆರ್ವೈ ಡಿಜಿಟಲ್ನಂತಹ ಜನಪ್ರಿಯ ಪಾಕಿಸ್ತಾನಿ ಡ್ರಾಮಾಗಳು ಪ್ರಸಾರವಾಗುವ ಚಾನೆಲ್ಗಳನ್ನು ನಿಷೇಧಿಸಲಾಗಿದೆ.
ಇತ್ತೀಚೆಗೆ, ಕೇಂದ್ರ ಸರ್ಕಾರವು ಒಟ್ಟಾರೆಯಾಗಿ 63 ಮಿಲಿಯನ್ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳನ್ನು ನಿರ್ಬಂಧಿಸಿದೆ. ಇವುಗಳಲ್ಲಿ ಡಾನ್, ಜಿಯೋ ನ್ಯೂಸ್, ಬೋಲ್ ನ್ಯೂಸ್ ಮತ್ತು ಸಮಾ ಟಿವಿಯಂತಹ ಮಾಧ್ಯಮಗಳು, ಪತ್ರಕರ್ತೆ ಅಸ್ಮಾ ಶಿರಾಜಿ ಮತ್ತು ಡಿಜಿಟಲ್ ಶೋ ‘ದಿ ಪಾಕಿಸ್ತಾನ್ ಎಕ್ಸ್ಪೀರಿಯೆನ್ಸ್’ ನಂತಹ ಜನಪ್ರಿಯ ಚಾನೆಲ್ಗಳು ಸೇರಿವೆ.