ನವದೆಹಲಿ : ಭಾರತದಲ್ಲಿ ಸಿಲುಕಿರುವ ಪಾಕಿಸ್ತಾನಿ ಪ್ರಜೆಗಳು ಪಾಕಿಸ್ತಾನಕ್ಕೆ ಹೋಗಲು ಭಾರತ ಸರ್ಕಾರ ಗಡುವು ವಿಸ್ತರಿಸಿದೆ.
ಅನೇಕ ಪಾಕ್ ಪ್ರಜೆಗಳು ಪಾಕಿಸ್ತಾನಕ್ಕೆ ಪ್ರವೇಶಿಸಲು ವಾಘಾ-ಅಟ್ಟಾರಿ ಗಡಿಯನ್ನು ತಲುಪಿದ್ದಾರೆ. ಆದರೂ ಪಾಕ್ ಸರ್ಕಾರ ಅವರನ್ನು ಪಾಕಿಸ್ತಾನಕ್ಕೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ. ಹೀಗಾಗಿ, ವಲಸೆಯಿಂದಾಗಿ ಪಾಕಿಸ್ತಾನದ ಸ್ವಂತ ನಾಗರಿಕರಿಗೆ ತೊಂದರೆಯಾಗುತ್ತಿದೆ. ಬುಧವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ಒಟ್ಟು 125 ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ತೊರೆದಿದ್ದಾರೆ. ಇಲ್ಲಿಯವರೆಗೆ 911 ಪಾಕಿಸ್ತಾನಿ ನಾಗರಿಕರು ದೇಶ ತೊರೆದಿದ್ದಾರೆ ಎಂದು ವರದಿಯಾಗಿದೆ.
ವಾಘಾ ಗಡಿಯಲ್ಲಿ ಇಸ್ಲಾಮಾಬಾದ್ ತಮ್ಮ ಪ್ರವೇಶ ಪ್ರಕ್ರಿಯೆ ವಿಳಂಬ ಮಾಡಿದ ಬಳಿಕ ಭಾರತ ಪಾಕಿಸ್ತಾನಿ ಪ್ರಜೆಗಳು ಮನೆಗೆ ತೆರಳುವ ದಿನಾಂಕವನ್ನು ವಿಸ್ತರಿಸಿದೆ. ಈ ಮೊದಲು ಏಪ್ರಿಲ್ 30ಕ್ಕೆ ಗಡುವು ನಿಗದಿಪಡಿಸಲಾಗಿತ್ತು. ಆದರೆ, ಭಾರತದಲ್ಲಿ ಸಿಕ್ಕಿಬಿದ್ದ ಪಾಕಿಸ್ತಾನಿ ನಾಗರಿಕರ ವಿನಂತಿಯ ಮೇರೆಗೆ ಮಾನವೀಯತೆಯ ದೃಷ್ಟಿಯಿಂದ ಭಾರತ ಗಡುವನ್ನು ವಿಸ್ತರಿಸಿದೆ. ಆದರೆ ಪಾಕಿಸ್ತಾನವು ತಮ್ಮದೇ ಪ್ರಜೆಗಳ ವಾಪಸಾತಿಗೆ ತೊಂದರೆ ಉಂಟುಮಾಡುತ್ತಿರುವುದರಿಂದ ನೂರಾರು ಜನರು ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ.