ಪಾಕಿಸ್ತಾನ್ ತಂಡದ ಸ್ಟಾರ್ ಆಟಗಾರರಾದ ಬಾಬರ್ ಆಝಂ, ಮೊಹಮ್ಮದ್ ರಿಝ್ವಾನ್ ಹಾಗೂ ನಸೀಮ್ ಶಾ ಮುಂಬರುವ ನ್ಯಾಷನಲ್ ಟಿ20 ಚಾಂಪಿಯನ್ಶಿಪ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಪಾಕಿಸ್ತಾನದ ದೇಶೀಯ ಟಿ20 ಟೂರ್ನಿಯಾಗಿರುವ ಈ ಪಂದ್ಯಾವಳಿಯಿಂದ ಪ್ರಮುಖ ಆಟಗಾರರು ಹೊರಗುಳಿಯಲು ಮುಖ್ಯ ಕಾರಣ ವೇತನ ಕಡಿತ ಎಂದು ತಿಳಿದು ಬಂದಿದೆ.
ಆದರೀಗ ರಾಷ್ಟ್ರೀಯ ತಂಡದಿಂದ ಹೊರಬಿದ್ದರೂ ಈ ಮೂವರು ಆಟಗಾರರು ನ್ಯಾಷನಲ್ ಟಿ20 ಚಾಂಪಿಯನ್ಶಿಪ್ ಆಡಲು ಹಿಂದೇಟು ಹಾಕಿರುವುದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಚಿಂತೆ ಹೆಚ್ಚಿಸಿದೆ.ಇನ್ನು ಈ ಬಾರಿಯ ನ್ಯಾಷನಲ್ ಟಿ20 ಚಾಂಪಿಯನ್ಶಿಪ್ ಟೂರ್ನಿಯು ಫೈಸಲಾಬಾದ್, ಲಾಹೋರ್ ಮತ್ತು ಮುಲ್ತಾನ್ ನಗರಗಳಲ್ಲಿ ನಡೆಯಲಿದ್ದು, ಒಟ್ಟು 39 ಪಂದ್ಯಗಳನ್ನು ಆಡಲಾಗುತ್ತದೆ. ಅಲ್ಲದೆ ಈ ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 27 ರಂದು ಫೈಸಲಾಬಾದ್ನಲ್ಲಿ ನಡೆಯಲಿದೆ.
ಇತ್ತ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಆಟಗಾರರ ವೇತನ ಕಡಿತಗೊಳಿಸಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ, ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ತಂಡದ ಆಟಗಾರರ ವೇತನಕ್ಕೂ ಕತ್ತರಿ ಹಾಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.