ಶಿಮ್ಲಾ: ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಶುಕ್ರವಾರ ಪಾಕಿಸ್ತಾನದ ರಾಷ್ಟ್ರೀಯ ಚಿಹ್ನೆಮತ್ತು ‘ಪಿಐಎ’ ಎಂಬ ಸಂಕ್ಷಿಪ್ತ ರೂಪವನ್ನು ಹೊಂದಿರುವ ಅನುಮಾನಾಸ್ಪದ ಬಲೂನ್ ಪತ್ತೆಯಾಗಿದೆ. ಕಾಂಗ್ರಾ ಜಿಲ್ಲೆಯ ನೂರ್ಪುರ್ ಪ್ರದೇಶದ ಸುಲಿಯಾಲಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಛತ್ರಿ ಮಾತಾ ದೇವಸ್ಥಾನದ ಬಳಿ ಮಹಿಳೆಯೊಬ್ಬರು ಇದನ್ನು ನೋಡಿ ಅವರು ತಮ್ಮ ತಂದೆಗೆ ತಿಳಿಸಿದ್ದಾರೆ. ಬಳಿಕ ಗ್ರಾಮದ ಮುಖ್ಯಸ್ಥರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಲೂನ್ ವಶಕ್ಕೆ ಪಡೆದಿದ್ದಾರೆ.
ನೂರ್ಪುರ್ ಪ್ರದೇಶದ ಸುಲಿಯಾಲಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಛತ್ರಿ ಮಾತಾ ದೇವಸ್ಥಾನದ ಬಳಿ ಶೀತಲ್ ಎಂಬ ಸ್ಥಳೀಯ ಮಹಿಳೆ ಶುಕ್ರವಾರ ಪಾಕಿಸ್ತಾನದ ರಾಷ್ಟ್ರೀಯ ಚಿಹ್ನೆ ಮತ್ತು ‘ಪಿಐಎ’ ಎಂಬ ಸಂಕ್ಷಿಪ್ತ ರೂಪವನ್ನು ಹೊಂದಿರುವ ಬಲೂನ್ ಅನ್ನು ಗಮನಿಸಿದರು.