ಶ್ರೀನಗರ : ಪಂಜಾಬ್ನ ಫಿರೋಜ್ಪುರ ಸೆಕ್ಟರ್ನಲ್ಲಿ ಆಕಸ್ಮಿಕವಾಗಿ ಗಡಿರೇಖೆ ದಾಟಿ ಬಂಧನಕ್ಕೆ ಒಳಗಾಗಿರುವ ಗಡಿ ಭದ್ರತಾ ಪಡೆ(ಬಿಎಸ್ಎಫ್) ಯೋಧನನ್ನು ಹಸ್ತಾಂತರಿಸಲು ಪಾಕಿಸ್ತಾನ ನಿರಾಕರಿಸಿದೆ.
ಗುರುವಾರ ಸಂಜೆ ಧ್ವಜ ಸಭೆಗೆ ರೇಂಜರ್ಗಳು ಬರಲಿಲ್ಲ. ಮಾಧ್ಯಮಗಳಲ್ಲಿ ತಮ್ಮ ಪ್ರಚಾರಕ್ಕಾಗಿ ಪಾಕಿಸ್ತಾನ ಗಡಿರೇಖೆ ದಾಟಿದ ಯೋಧನನ್ನು ಬಳಸಲು ಮುಂದಾಗಿದೆ.
ಪಂಜಾಬ್ನ ಫಿರೋಜ್ಪುರ ಬಳಿ 182 ನೇ ಬೆಟಾಲಿಯನ್ ಕಾನ್ಸ್ಟೇಬಲ್ ಪಿಕೆ ಸಾಹು ಅವರು ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ್ದರು. ಅವರನ್ನು ಪಾಕಿಸ್ತಾನ ರೇಂಜರ್ಳು ಬಂಧಿಸಿದ್ದರು. ಸಾಹು ಅವರನ್ನು ಗಡಿ ಹೊರಠಾಣೆಯಿಂದ ದೂರದಲ್ಲಿರುವ ಪಾಕಿಸ್ತಾನಿ ಪ್ರದೇಶಕ್ಕೆ ಕರೆದೊಯ್ಯಲಾಗಿದೆ.
ಪಶ್ಚಿಮ ಬಂಗಾಳದ ನಿವಾಸಿ ಸಾಹು ಸಮವಸ್ತ್ರದಲ್ಲಿದ್ದರು ಮತ್ತು ಅವರ ಸೇವಾ ರೈಫಲ್ ಅನ್ನು ಹೊಂದಿದ್ದರು. ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಮುಂದಕ್ಕೆ ಹೋದಾಗ ಪಾಕಿಸ್ತಾನ ರೇಂಜರ್ಗಳು ಅವರನ್ನು ಬಂಧಿಸಿದ್ದಾರೆ.
ರಜೆಗಾಗಿ ಮನೆಗೆ ಬಂದಿದ್ದ ಸಾಹು ಅವರು ಮಾರ್ಚ್ 31 ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಕಳೆದ 17 ವರ್ಷಗಳ ಕಾಲ ಬಿಎಸ್ಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಬಂಧನಕ್ಕೆ ಒಳಗಾದ ಸಾಹು ಅವರನ್ನು ಬಿಡುಗಡೆಗೊಳಿಸಲು ಬಿಎಸ್ಎಫ್ ಪ್ರಯತ್ನಿಸುತ್ತಿದೆ.
 
				 
         
         
         
															 
                     
                     
                     
                     
                    


































 
    
    
        