ನವದೆಹಲಿ : ಜ.13 ರಿಂದ ಫೆ.26 ರವರೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಅಡ್ಡಿಪಡಿಸುವುದಾಗಿ ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ ನಾಯಕ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹೊಸ ಬೆದರಿಕೆ ಹಾಕಿದ್ದಾನೆ.
ಲಕ್ನೋ ಮತ್ತು ಪ್ರಯಾಗ್ರಾಜ್ ವಿಮಾನ ನಿಲ್ದಾಣಗಳಲ್ಲಿ ಖಲಿಸ್ತಾನಿ ಮತ್ತು ಕಾಶ್ಮೀರಿ ಧ್ವಜಗಳನ್ನು ಹಾರಿಸುವಂತೆ ತಮ್ಮ ಬೆಂಬಲಿಗರನ್ನು ಒತ್ತಾಯಿಸಿದ್ದು, ವಿಡಿಯೋದಲ್ಲಿ “ಮಹಾಕುಂಭ ಪ್ರಯಾಗ್’ರಾಜ್ 2025 ಯುದ್ಧಭೂಮಿಯಾಗಲಿದೆ” ಎಂದು ಘೋಷಿಸಿದ್ದಾನೆ. ಹತ್ತು ದಿನಗಳಲ್ಲಿ ಮಹಾಕುಂಭವನ್ನು ಗುರಿಯಾಗಿಸಿಕೊಂಡು ಪನ್ನುನ್ ಅವರ ಎರಡನೇ ಬೆದರಿಕೆ ಇದಾಗಿದೆ.