ರಾಂಚಿ : ನಕ್ಸಲ್ ವಿರುದ್ಧ ಭದ್ರತಾ ಪಡೆಗಳು ಜಾರ್ಖಂಡ್ನಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಮತ್ತೋರ್ವ ಮೋಸ್ಟ್ ವಾಂಟೆಡ್ ನಕ್ಸಲ್ ಪಪ್ಪು ಲೋಹ್ರಾನನ್ನು ಹತ್ಯೆಯಾಗಿದ್ದಾನೆ.
ಲತೇಹಾರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಈ ಕಾರ್ಯಾಚರಣೆ ನಡೆದಿದೆ. ನಕ್ಸಲರಿಂದ ಭಾರಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಪಪ್ಪು ಲೋಹರಾ ಜೊತೆ ಆತನ ಸಹಚರ ಪ್ರಭಾತ್ ಗಂಜುನನ್ನೂ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಪ್ಪು ಲೋಹರಾ ಬಗ್ಗೆ ಸುಳಿವು ನೀಡಿದವರಿಗೆ ಜಾರ್ಖಂಡ್ ಪೊಲೀಸ್ 10 ಲಕ್ಷ ರೂ., ಪ್ರಭಾತ್ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು. ಈ ಇಬ್ಬರೂ ಉನ್ನತ ನಕ್ಸಲ್ ನಾಯಕರು ಜನ ಮುಕ್ತಿ ಪರಿಷತ್ ಸಂಘಟನೆಯ ನಕ್ಸಲ್ ರೂವಾರಿಗಳಾಗಿದ್ದರು ಎನ್ನಲಾಗಿದೆ.
ಜಾರ್ಖಂಡ್ನಲ್ಲಿ ಈ ಇಬ್ಬರೂ ನಕ್ಸಲ್ ಚಟುವಟಿಕೆಯ ಉನ್ನತ ಸ್ತರದ ನಾಯಕರಾಗಿದ್ದರು. ಇವರಿಬ್ಬರ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದು, ಮೋಸ್ಟ್ ವಾಂಟೆಡ್ ನಕ್ಸಲ್ ಪಟ್ಟಿಗೆ ಸೇರಿದವರಾಗಿದ್ದರು.