ಹೊಳಲ್ಕೆರೆ: ಹೌದು ಒಂದುಕಡೆ ಭಯಂಕರ ಮಳೆ ಆದರೆ ಚಿತ್ರದುರ್ಗ ಜಿಲ್ಲೆಯ ಕೆಲವಡೆ ಮಳೆ ಆಗದೆ ಬಿತ್ತನೆ ಕುಂಟಿತವಾಗಿದೆ ಮಳೆ ಬರಲಿ ಎಂದು ತಾಲೂಕಿನ ಉಪ್ಪರಿಗೆನಹಳ್ಳಿ ಗ್ರಾಮದಲ್ಲಿ ಮಳೆಗಾಗಿ. ಪ್ರಾರ್ಥಿಸಿ ಕತ್ತೆಗಳಿಗೆ ಮದುವೆ ಮಾಡಿಸಿ, ಮೆರವಣಿಗೆ ಮಾಡಲಾಯಿತು.
ಗ್ರಾಮಕ್ಕೆ ಮಳೆ ಇಲ್ಲದೆ ಜನರ ಜೀವನ ಕಂಗಲಾಗಿದೆ, ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ ಇದ್ದ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದ್ದಲ್ಲದ ಮಧ್ಯೆ ಕರೆಂಟಿನ ಅಭಾವ ಇದೆ. ಕೃಷಿಗೆ ಮಳೇಯ ನೀರೇ ಆಧಾರವಾಗಿದೆ, ಆದರೆ ವರುಣ ಕಣ್ಣು ಬಿಡುತ್ತಿಲ್ಲ, ಮಳೆ ಇಲ್ಲೆ ಗ್ರಾಮದ ಜನತೆ ಕಂಗಾಲಾಗಿದ್ದಾರೆ, ಕತ್ತೇಗಳ ಮದುವೆಯನ್ನು ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ಇದೆ ಈ ಹಿನ್ನಲೆಯಲ್ಲಿ ಇಂದು ಉಪ್ಪರಿಗೆನಹಳ್ಳಿ ಗ್ರಾಮದಲ್ಲಿ ಕತ್ತೆಗಳ ಮದುವೆಯನ್ನು ಮಾಡಿ ಗ್ರಾಮದ ತುಂಬೆಲ್ಲಾ ಮೆರವಣಿಗೆಯನ್ನು ನಡೆಸುವುದರ ಮೂಲಕ ಮಳೆಗಾಗಿ ಪ್ರಾರ್ಥಿಸಲಾಯಿತು
ಈ ಕಾರ್ಯುಕ್ರಮವೂ ಊರಿನ ಗುಡಿ ಗೌಡರಾದ. ತಿಪ್ಪೇಸ್ವಾಮಿಯವರ ನೇತೃತ್ವದಲ್ಲಿ ನಡೆಸಲಾಯಿತು, ಇದರಲ್ಲಿ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.