ಪರಮಹಂಸ ಪೀಠಾಧೀಶ್ವರ ಶಿವಯೋಗಿ ಮೌನಿ ಮಹಾರಾಜರು ಶುಕ್ರವಾರ ರಾತ್ರಿ ಭೂಸಮಾಧಿಯಾದರು. ಅವರು ಇದುವರೆಗೆ 55ಕ್ಕೂ ಹೆಚ್ಚು ಬಾರಿ ಭೂಸಮಾಧಿ ವೃತ ಆಚರಿಸಿದ್ದಾರೆ. ಇದು ಅವರ 57ನೇ ಸಮಾಧಿ ಸ್ಥಳವಾಗಿದೆ. ಅವರು ಹೀಗೆ ಸಮಾಧಿ ಹೊಂದಲು ಒಂದು ಕಾರಣ ಅದೇನೆಂದರೆ ಮೌನಿ ಅಮಾವಾಸ್ಯೆಯಂದು ಪ್ರಯಾಗರಾಜ್ ಮಹಾಕುಂಭದಲ್ಲಿ ನಡೆದ ಕಾಲ್ತುಳಿತ ಘಟನೆ!! ಯಸ್, ಈ ಘಟನೆಯಿಂದ ತುಂಬಾ ನೊಂದ ಅವರು ಈ ಕಠಿಣ ಹಾದಿ ಹಿಡಿದಿದ್ದಾರೆ. ಹೀಗಾಗಿ ಮೌನಿ ಮಹಾರಾಜರು 10 ಅಡಿ ಆಳದ ಗುಂಡಿಯಲ್ಲಿ ಜೀವಂತ ಭೂ ಸಮಾಧಿಯಾಗಿದ್ದಾರೆ.
ಇನ್ನು ವಿಶೇಷ ಅಂದ್ರೆ ಮಹಾಕುಂಭದಲ್ಲಿ ಮೊಟ್ಟಮೊದಲ ಬಾರಿಗೆ ಮೌನಿ ಬಾಬಾ 7 ಕೋಟಿ 51 ಲಕ್ಷ ರುದ್ರಾಕ್ಷ ರತ್ನಗಳೊಂದಿಗೆ 12 ಜ್ಯೋತಿರ್ಲಿಂಗಗಳನ್ನು ಸ್ಥಾಪಿಸಿದ್ದಾರೆ. ಮಹಾರಾಜ ಶಿವಯೋಗಿಗಳು 13 ವರ್ಷಗಳಿಂದ ಮೌನವಾಗಿದ್ದಾರೆ, ಆದ್ದರಿಂದ ಜನರು ಅವರನ್ನು ಮೌನಿ ಮಹಾರಾಜ್ ಎಂದು ಕರೆಯುತ್ತಾರೆ.