ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ಸ್ಕೆಚ್ ರೂಪಿಸಲು ಮುನ್ನ ಭರ್ಜರಿ ಪಾರ್ಟಿ ಮಾಡಿದ್ರಾ ಆರೋಪಿಗಳು?ಎಂಬ ಮಾಹಿತಿ ದೊರೆತಿದೆ. ಎಪ್ರಿಲ್ 2ರಂದು ಹತ್ಯೆಗೆ ಸ್ಕೆಚ್ ರೂಪಿಸಲು ರಹಸ್ಯ ಸ್ಥಳದಲ್ಲಿ ಪಾರ್ಟಿ ಅನುಮಾನ ವ್ಯಕ್ತವಾಗಿದೆ . ಚಿಕ್ಕಮಗಳೂರಿನ ಕಳಸದ ರೆಸಾರ್ಟ್ ಒಂದರಲ್ಲಿ ಆರೋಪಿಗಳು ಪಾರ್ಟಿ ಮಾಡಿರೋ ಆರೋಪಿಗಳ ನೈಟ್ ಪಾರ್ಟಿ ಫೋಟೋ ಲಭ್ಯವಾಗಿದೆ.
ಕ್ಯಾಂಪ್ ಫೈರ್ ಹಾಕಿ ಭರ್ಜರಿ ಪಾರ್ಟಿ ಮಾಡಿರೋ ಫೋಟೋ ಲಭ್ಯವಾಗಿದ್ದು ಫಾಸಿಲ್ ಸಹೋದರ ಆದಿಲ್ ಕೊಟ್ಟ ಹಣದಲ್ಲಿ ಮಜಾ ಉಡಾಯಿಸಿದ್ರಾ? ಎಂಬ ಅನುಮಾನ ವ್ಯಕ್ತವಾಗಿದೆ. ಫಾಸಿಲ್ ಸಹೋದರ ಆರಂಭದಲ್ಲಿ ಮೂರು ಲಕ್ಷ ಹಣ ಕೊಟ್ಟಿದ್ದು ಅದೇ ಹಣದಲ್ಲಿ ಮೂವರು ಆರೋಪಿಗಳಿಂದ ಕಳಸದಲ್ಲಿ ಪಾರ್ಟಿಮಾಡಿ ಮಜಾ ಉಡಾಯಿಸಿದರೆಂಬ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸುಹಾಸ್ ಶೆಟ್ಟಿ ಕೊಲೆಗೆ ಮೂರು ತಿಂಗಳ ಹಿಂದೆಯೇ ಸಂಚು ಹೂಡಲಾಗಿತ್ತು. ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ (ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಹತ್ಯೆಗೊಳಗಾಗಿದ್ದ ಯುವಕ) ತಮ್ಮ ಆದಿಲ್ 3 ಲಕ್ಷ ರೂಪಾಯಿ ಹಣ ಕೊಟ್ಟಿದ್ದ. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ದ. ಅಕಸ್ಮಾತ್ ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಪ್ಲಾನ್ ಬಿಯನ್ನೂ ರೆಡಿ ಮಾಡಿಕೊಳ್ಳಲಾಗಿತ್ತು ಎಂಬುದು ತಿಳಿದುಬಂದಿದೆ.
ಚಿಕ್ಕಮಗಳೂರು ಮೂಲದ ರಂಜಿತ್ ಜೊತೆ ಸೇರಿ ಪಾರ್ಟಿ ಮಾಡಿದ್ದೂ ಕೊಲೆ ಆರೋಪದಲ್ಲಿ ಬಂಧಿತರಾಗಿರೋ ಮೂವರು ಆರೋಪಿಗಳು ಪಾರ್ಟಿಯಲ್ಲಿರೋ ಫೋಟೋ ಲಭ್ಯವಾಗಿದೆ. ಅದೇ ರಹಸ್ಯ ಜಾಗದಲ್ಲಿ ಹತ್ಯೆಗೆ ಪಕ್ಕಾ ಪ್ಲಾನ್ ರೆಡಿ ಮಾಡಿದ್ದೂ ಮುಜಮ್ಮಿಲ್, ನಿಯಾಜ್ ಹಾಗೂ ರಂಜಿತ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ಮೂವರ ಜೊತೆ ಇನ್ನೂ ಐದು ಜನ ಅಪರಿಚಿತರು ಪಾರ್ಟಿಯಲ್ಲಿ ಭಾಗಿಯಾಜಿಯದ್ದು ಇದೇ ಪಾರ್ಟಿಯಲ್ಲಿ ನಿಯಾಜ್ ರಂಜಿತ್ ನನ್ನು ಮುಜಮ್ಮಿಲ್ ಗೆ ಪರಿಚಯ ಮಾಡಿಸಿದ್ದನೆಂದು ಮಾಹಿತಿ ದೊರೆತಿದೆ. ಈ ವೇಳೆ ಸುಹಾಸ್ ಹತ್ಯೆ ಬಗ್ಗೆ ಮಾತುಕತೆ ನಡೆದಿರೋ ಅನುಮಾನ ವ್ಯಕ್ತವಾಗಿದೆ.
ಆದರೆ ಕೋಮು ಹತ್ಯೆಗೆ ಸಂಬಂಧಿಸಿದಂತೆ ಇದೀಗ ವಿದೇಶದಿಂದಲೂ ಹಣ ಕಳುಹಿಸಲಾಗಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಆ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಯಾಕೆಂದರೆ ಹತ್ಯೆಗೆ ಬಳಸಿದ ವಾಹನಗಳ ಬೆಲೆಯೇ ೧೫ ಲಕ್ಷಕ್ಕೂ ಮೀರಿದೆ.ಅದರಿಂದ ಈ ಹತ್ಯೆಗೆ ಹಲವು ಮಾಹಿತಿದಾರರಿಂದ ಹಿಡಿದು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲು ಕೋಟಿಗಟ್ಟಲೆ ಹಣ ಸಂಗ್ರಹಿಸಿದ್ದಾರೆಂದು ಮಾಹಿತಿ ದೊರೆತಿದೆ. ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಅನೇಕ ಕಾಣದ ಕೈಗಳ ಕೈವಾಡ ಶಂಕೆ ವ್ಯಕ್ತವಾಗಿದ್ದು, ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.