ನವದೆಹಲಿ : ಯಾವುದೇ ಕೆಲಸವನ್ನು ಕಠಿಣ ಪರಿಶ್ರಮ ಮತ್ತು ದೃಢನಿಶ್ಚಯದಿಂದ ಮಾಡಿದರೆ, ಅದು ಪೂರ್ಣಗೊಳ್ಳುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅಂತಹ ಒಂದು ಕಥೆ 40 ವರ್ಷದ ನಿಸಾ ಉನ್ನಿರಾಜನ್ ಅವರದ್ದು, ಅವರು ತಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ವಯಸ್ಸು, ಅಂಗವೈಕಲ್ಯ , ಇತರ ಅಡೆತಡೆಗಳು ಕನಸುಗಳನ್ನು ನನಸಾಗಿಸಲು ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಸಾಬೀತುಪಡಿಸಿದ್ದಾರೆ. 2024 ರಲ್ಲಿ ತನ್ನ ಏಳನೇ ಪ್ರಯತ್ನದಲ್ಲಿ 1,000 ನೇ ರ‍್ಯಾಂಕ್ ಪಡೆದ ನಿಸಾ ಯಶಸ್ಸಿನ ಕಥೆ.
ಯುಪಿಎಸ್‌ಸಿಯಲ್ಲಿ 1000 ನೇ ರ‍್ಯಾಂಕ್ ಪಡೆದ ನಿಸಾ ಪ್ರಯಾಣದ ಹಾದಿ ಸುಲಭವಾಗಿರಲಿಲ್ಲ, ಆದರೆ ಅವರು ಎಂದಿಗೂ ಪ್ರಯತ್ನ ಬಿಡಲಿಲ್ಲ. 35 ನೇ ವಯಸ್ಸಿನಲ್ಲಿ ನಾಗರಿಕ ಸೇವಾ ಅಂದರೆ ಯುಪಿಎಸ್ಸಿ ಪರೀಕ್ಷೆ ಪ್ರಯಾಣವನ್ನು ಪ್ರಾರಂಭಿಸಿದರು.
ನಿಸಾ ತಮ್ಮ ಇಬ್ಬರು ಹೆಣ್ಣುಮಕ್ಕಳಾದ ನಂದನ (11), ತನ್ವಿ (7) ಮತ್ತು ಪತಿ ಅರುಣ್ ಅವರ ಬೆಂಬಲದೊಂದಿಗೆ ಮನೆಯಲ್ಲಿ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಮನೆಯಲ್ಲಿ ಗಂಡ ಮಕ್ಕಳನ್ನು ನೋಡಿಕೊಂಡು ಜೊತೆಗೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಅವರ ಪೋಷಕರಾದ ನಿವೃತ್ತ ಪೊಲೀಸ್ ಸಿಬ್ಬಂದಿ ಕೂಡ ಮಗಳ ಸಾಧನೆಗೆ ಬೆಂಬಲವಾಗಿ ನಿಂತಿದ್ದರು.
ತಿರುವನಂತಪುರದ ಖಾಸಗಿ ತರಬೇತಿ ಕೇಂದ್ರದಿಂದ ನಾಗರಿಕ ಸೇವೆಗಳಿಗೆ ತಯಾರಿ ನಡೆಸಿದರು. ಇದಲ್ಲದೆ, ಅವರು ಸ್ವತಃ ಶ್ರವಣದೋಷವುಳ್ಳ ಕೊಟ್ಟಾಯಂ ಸಬ್-ಕಲೆಕ್ಟರ್ ರಂಜಿತ್ ಅವರಿಂದ ಅಪಾರ ಸ್ಫೂರ್ತಿ ಪಡೆದರು. ಅದೇ ಸವಾಲನ್ನು ಎದುರಿಸಿದ ವ್ಯಕ್ತಿಯ ಯಶಸ್ಸನ್ನು ನೋಡುವುದು ತನ್ನ ಭರವಸೆಯನ್ನು ಹೆಚ್ಚಿಸಿದೆ ಎಂದು ನಿಸಾ ಹೇಳಿದರು.
ನಿಸಾ ಹಲವು ಬಾರಿ ವೈಫಲ್ಯವನ್ನು ಎದುರಿಸಿದರು. ಆದರೆ ಅವರು ಅದನ್ನು ಎಂದಿಗೂ ಸೋಲು ಎಂದು ಸ್ವೀಕರಿಸಲಿಲ್ಲ ನಿಸಾ ಯುಪಿಎಸ್‌ಸಿಯಲ್ಲಿ ಅಂಗವೈಕಲ್ಯ ವಿಭಾಗದಲ್ಲಿ ಈ ಯಶಸ್ಸನ್ನು ಸಾಧಿಸಿದ್ದಾರೆ.ಈಗ ನಿಸಾ ಐಎಎಸ್ ಆಗಲು ಸಿದ್ಧಳಾಗಿದ್ದಾರೆ. ಅವರ ಪ್ರಯಾಣ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ. ಅವರ ಕಥೆಯು ಅತಿ ಉದ್ದದ ಪ್ರಯಾಣವಾದರೂ ಸಹ ಒಂದು ಸಣ್ಣ ದಿಟ್ಟ ಹೆಜ್ಜೆಯಿಂದ ಪ್ರಾರಂಭವಾಗುತ್ತದೆ ಎಂದು ತೋರಿಸುತ್ತದೆ.