ಬಿಹಾರ: ಪಾಸ್ತಾ ತಿಂದು ಇಬ್ಬರು ಸಾವನ್ನಪ್ಪಿದ್ದು, ಐವರ ಸ್ಥಿತಿ ಗಂಭೀರವಾಗಿರುವ ಘಟನೆ ಬಿಹಾರದ ದಹಿವರ್ ಗ್ರಾಮದಲ್ಲಿ ನಡೆದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ದಹಿವರ್ ಗ್ರಾಮದ ಕುಶ್ವಾಹ ಟೋಲಾ ನಿವಾಸಿ ಕಿಶುನ್ ಮಹಾತೋ (35 ವರ್ಷ) ಅವರ ಅವಿಭಕ್ತ ಕುಟುಂಬವು 9 ಸದಸ್ಯರನ್ನು ಹೊಂದಿದೆ. ಸೋಮವಾರ ರಾತ್ರಿ ಇಬ್ಬರು ಸದಸ್ಯರನ್ನು ಹೊರತುಪಡಿಸಿ, ಮಕ್ಕಳು ಸೇರಿದಂತೆ ಏಳು ಮಂದಿ ಫಾಸ್ಟ್ಫುಡ್ ಸೆಂಟರ್ನಲ್ಲಿ ಪಾಸ್ತಾ ತಿಂದ ಬಳಿಕ ಅನಾರೋಗ್ಯ ಕಾಣಿಸಿಕೊಂಡಿದೆ.
ಎಲ್ಲರನ್ನೂ ಬಕ್ಸಾರ್ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಕಿಶುನ್ ಮಹಾತೋ ಮತ್ತು ಅವರ ಮಗ ಅಮಿತ್ (5 ವರ್ಷ) ಸಾವನ್ನಪ್ಪಿದರು. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಐದು ಮಂದಿಯ ಆರೋಗ್ಯ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಹಾರವು ಹೇಗೆ ವಿಷಕಾರಿಯಾಯಿತು ಎಂಬುದರ ಕುರಿತು ಪರಿಶೀಲಿಸಲಾಗುತ್ತಿದೆ.