ಜೀ ಕನ್ನಡ ವಾಹಿನಿಯಲ್ಲಿ ಅದೆಷ್ಟೋ ರಿಯಾಲಿಟಿ ಶೋಗಳು ಬಂದು ಹೋಗಿವೆ. ಅದರಲ್ಲಿ ಅನೇಕ ಶೋಗಳು ಜನರ ಮನಸ್ಸಲ್ಲಿ ಇಂದಿಗೂ ಅಚ್ಚಳಿಯದೆ ಉಳಿದುಕೊಂಡಿದೆ. ಅದರಲ್ಲಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕೂಡಾ ಒಂದು. ಇದೀಗ ಮತ್ತೆ ಅದೇ ಶೋ ಜೀ ಕನ್ನಡ ವಾಹಿನಿಯಲ್ಲಿ ಬರ್ತಾ ಇದೆ.
ಇದಕ್ಕೆ ಸಂಬಂಧಿಸಿದಂತೆ ಜೀ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಹಳ್ಳಿ ಜೀವನ ನಡೆಸಲು ರೆಡಿ ಇರೋ ಮಾಡರ್ನ್ ಹುಡುಗಿಯರಿಗೆ ಆಹ್ವಾನ ನೀಡಲಾಗಿದೆ. ಅಕುಲ್ ಬಾಲಾಜಿ ಶೋನ ನೇತೃತ್ವ ವಹಿಸಿ ನಿರೂಪಣೆ ಮಾಡಲಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಆಡಿಷನ್ ನಡೆಯಲಿದೆ. ಆಡಿಷನ್ನಲ್ಲಿ ಭಾಗವಹಿಸುವವರಿಗೆ ಕೆಲವು ನಿಯಮಗಳಿವೆ. ನಿಮ್ಮ ವಯಸ್ಸು 18ರಿಂದ 28 ವರ್ಷ ಆಗಿರಬೇಕು. ನೀವು ನಗರದಲ್ಲೇ ಹುಟ್ಟಿ ಬೆಳೆದು, ಸಖತ್ ಮಾಡರ್ನ್ ಆಗಿರಬೇಕು. ಬರುವಾಗ ಆಧಾರ್ ಕಾರ್ಡ್ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ತರೋದು ಕಡ್ಡಾಯ.