ಬೆಂಗಳೂರು:ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಅವರು ಎ1 ಆರೋಪಿ ಆಗಿದ್ದಾರೆ. ದರ್ಶನ್ ಎ2 ಆರೋಪಿ ಎನಿಸಿಕೊಂಡಿದ್ದಾರೆ.
ಇಂದು ಪ್ರಕರಣದ ವಿಚಾರಣೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ನಡೆದಿದೆ. ಜುಲೈ 10ಕ್ಕೆ ವಿಚಾರಣೆ ಮುಂದೂಡಲಾಗಿದೆ. ಅಂದು ಎಲ್ಲ ಆರೋಪಿಗಳು ಹಾಜರಿ ಹಾಕಲು ಕೋರ್ಟ್ ಸೂಚಿಸಿದೆ. ಕೋರ್ಟ್‌ನ ವಿಚಾರಣೆ ಮುಗಿದ ನಂತರ ಮುಂದಿನ ವಿಚಾರಣಾ ದಿನಾಂಕವನ್ನು ತಿಳಿಸಲಾಯಿತು. ಆಗ ಕೋರ್ಟ್‌ನಿಂದ ದರ್ಶನ್ ಹೊರಬಂದು ಮನೆಗೆ ಹೋಗಲು ಲಿಫ್ಟ್ ಸೇರಿಕೊಂಡರು.
ಆಗ ಹಿಂದಿನಿಂದ ಓಡಿಕೊಂಡು ಬಂದು ದರ್ಶನ್ ಇರುವ ಲಿಫ್ಟ್‌ನೊಳಗೆ ಹೋದ ಪವಿತ್ರಾ ಗೌಡ, ದರ್ಶನ್ ಕೈ ಹಿಡಿದುಕೊಂಡು ಮಾತನಾಡಿಸಿ ಫೋನ್ ನಂಬರ್ ಕೊಡುವಂತೆ ಕೇಳಿದರು. ಆಗ ಫೋನ್ ನಂಬರ್ ಅನ್ನು ಹೇಳದೇ ಪವಿತ್ರಾಳ ಮೊಬೈಲ್ ಪಡೆದು, ಅದರಲ್ಲಿ ತನ್ನ ಹೊಸ ನಂಬರ್ ಡಯಲ್ ಮಾಡಿಕೊಟ್ಟರು. ಹೊರಗೆ ಬಂದಾಗಲೂ ಸಹ ಒಟ್ಟಿಗೆ ಲಿಫ್ಟ್ನಲ್ಲಿ ಬಂದರಂತೆ. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಅವರುಗಳು ಪರಸ್ಪರ ಮಾತನಾಡಿದ್ದಾರೆ.
ಈ ವೇಳೆ ಪವಿತ್ರಾ ಗೌಡ ಅವರು ತಮ್ಮ ಕಷ್ಟ ಹೇಳಿಕೊಂಡರಂತೆ. ಆಗ ದರ್ಶನ್, ಪವಿತ್ರಾ ಅವರನ್ನು ಅಪ್ಪಿಕೊಂಡು ಸಮಾಧಾನ ಮಾಡಿದ್ದಾರೆ. ನಾನಿದ್ದೀನಿ ಟೆನ್ಷನ್ ಬೇಡ ಎಂದು ಭರವಸೆ ನೀಡಿದರಂತೆ. ವಿಜಯಕ್ಷ್ಮಿ ಅವರು ದರ್ಶನ್ ಅವರೊಟ್ಟಿಗೆ ನಿನ್ನೆಯಷ್ಟೆ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಪವಿತ್ರಾ ಅವರು ದರ್ಶನ್ ಅವರ ಬಳಿ ನಂಬರ್ ಪಡೆದು ಮತ್ತೆ ಸಂಪರ್ಕಕ್ಕೆ ಬರುವ ಪ್ರಯತ್ನ ಮಾಡಿದ್ದಾರೆ.