ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡಗೆ ಜಾಮೀನು ಮಂಜೂರು ಆಗಿದ್ದು, ಪರಪ್ಪನ ಅಗ್ರಹಾರದಿಂದ ಇಂದು ಬಿಡುಗಡೆ ಆಗಿದ್ದಾರೆ.
ಕೊಲೆ ಪ್ರಕರಣದ A1 ಆರೋಪಿ ಪವಿತ್ರ ಗೌಡ ಆರು ತಿಂಗಳ ಬಳಿಕ ಜೈಲಿಂದ ಹೊರಬಂದಿದ್ದಾರೆ. ಇಷ್ಟು ದಿನ ಮಹಿಳಾ ಬ್ಯಾರಾಕ್‌ನಲ್ಲಿ ಇದ್ದ ಪವಿತ್ರ ಗೌಡ ರಿಲೀಸ್ ಆಗಿದ್ದಾರೆ.
ನಿನ್ನೆ ರಾತ್ರಿ ಶ್ಯೂರಿಟಿ ದಾಖಲೆ ಬರುವುದು ವಿಳಂಬ ಆದ ಹಿನ್ನೆಲೆ ಇಂದು ಪವಿತ್ರಾ ಗೌಡ ಬಿಡುಗಡೆಯಾಗಿದ್ದಾರೆ. ಜೈಲಿನ ಚೆಕ್ ಪೋಸ್ಟ್ ಮೂಲಕ ಹೊರಬರಲಿರುವ ಪವಿತ್ರಾಗೌಡ, ಆರ್.ಆರ್ ನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳಲಿದ್ದಾರೆ.