ಕಡಪ : ಸರ್ಕಾರಿ ನೌಕರರ ಮೇಲೆ ದಾಳಿ ಮಾಡುವ ಅಥವಾ ಕರ್ತವ್ಯಕ್ಕೆ ಅಡ್ಡಿಪಡಿಸುವ ಯಾವುದೇ ರಾಯಕೀಯ ನಾಯಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಶನಿವಾರ ಎಚ್ಚರಿಕೆ ನೀಡಿದ್ದಾರೆ.
ವೈ ಎಸ್ಆರ್ಸಿಪಿ ಸ್ಥಳೀಯ ನಾಯಕ ಸಿ.ಸುದರ್ಶ ನ್ ರೆಡ್ಡಿ ಅವರಿಂದ ಹಲ್ಲೆಗೊಳಗಾದ ದಲಿತ ಅಧಿಕಾರಿಯನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಪವನ್, ರಾಜಕೀಯ ನಾಯಕರು ಅಹಂಕಾರದಿಂದ ಅಧಿಕಾರಿಗಳ ಮೇಲೆ ದಾಳಿ ಮಾಡಿದರೆ, ತಕ್ಕ ಶಿಕ್ಷೆ ಅನುಭವಿಸುತ್ತೀರಿ. ಅದನ್ನು ನಾವು ಖಾತ್ರಿಪಡಿಸುತ್ತೇವೆ ಎಂದಿದ್ದಾರೆ.
ಕಚೇರಿಯ ಕೀಲಿಕೈ ನೀಡಲಿಲ್ಲ ಎಂಬ ಕಾರಣಕ್ಕೆ ಗಾಲಿವೀಡು ಮಂಡಲ ಪರಿಷದ್ ಅಭಿವೃದ್ಧಿ ಅಧಿಕಾರಿ (ಎಂಪಿಡಿಒ) ಜವಾಹರ್ ಬಾಬು ಅವರ ಮೇಲೆ ಸುದರ್ಶನ್ ರೆಡ್ಡಿ ಹಾಗೂ ಇನ್ನಷ್ಟು ಮಂದಿ ಅನ್ನಮಯ್ಯ ಜಿಲ್ಲೆಯಲ್ಲಿ ಹಲ್ಲೆ ಮಾಡಿ ನಿಂದಿಸಿದ್ದಾರೆ ಎಂದು ತಿಳಿಸಿದ್ದಾರೆ.