ನವದೆಹಲಿ: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಪಂಜಾಬ್ ಕಿಂಗ್ಸ್ (PBKS)ನ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿದ್ದಾರೆ. ರಿಕಿ ಪಾಂಟಿಂಗ್ ಎರಡು ತಿಂಗಳ ಹಿಂದೆಯಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆದಾಗ್ಯೂ, ಪಂಜಾಬ್‌ಗೆ ಸೇರಿದ ನಂತರ, ಇತರ ಕೋಚಿಂಗ್ ಸಿಬ್ಬಂದಿಯ ಬದಲಾವಣೆಯ ಬಗ್ಗೆ ಪಾಂಟಿಂಗ್ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ.
ಕಳೆದ 7 ವರ್ಷಗಳಲ್ಲಿ ಪಂಜಾಬ್ ಕಿಂಗ್ಸ್ ಪ್ರಾಂಚೈಸಿ, ಒಟ್ಟು 6 ಕೋಚ್‌ಗಳನ್ನು ಬದಲಾಯಿಸಿದೆ. ಅದರಲ್ಲೂ ನಾಲ್ಕು ಋತುಗಳಲ್ಲಿ ಪಾಂಟಿಂಗ್ PBKSನ ಮೂರನೇ ಮುಖ್ಯ ಕೋಚ್ ಆಗಿದ್ದಾರೆ. PBKS 2024ರ ಋತುವಿನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿ ಒಂಬತ್ತನೇ ಸ್ಥಾನವನ್ನು ಗಳಿಸಿತ್ತು. ಇತ್ತ ಪಾಂಟಿಂಗ್ DCಗೆ ಸತತ ಮೂರು ಋತುಗಳಲ್ಲಿ (2019 ರಿಂದ 2021) ಪ್ಲೇಆಫ್ ತಲುಪಲು ಸಹಾಯ ಮಾಡಿದ್ದರು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ