ಕಲಬುರಗಿ : ಬಾಕಿ ಪಾವತಿ ಹಾಗೂ ಮರು ನೇಮಕಕ್ಕೆ ರೂ. ಹದಿನೇಳು ಸಾವಿರ ಲಂಚ ಸ್ವೀಕರಿಸಿದ ಆರೋಪದ ಮೇಲೆ ಪಿಡಿಒ ಅವರನ್ನು ಲೋಕಾಯುಕ್ತ ಪೊಲೀಸರು (Lokayukta police) ಸೋಮವಾರ ಬಂಧಿಸಿದ್ದಾರೆ.
ಕಲಬುರಗಿ ತಾಲೂಕಿನ ಕವಲಗಾ (ಬಿ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿರಾಜ್ (Pritiraj)ಅವರೇ ಲಂಚ ಪಡೆದ ಆರೋಪ ಹೊತ್ತಿದ್ದಾರೆ. ಪಂಪ್ ಆಪರೇಟರ್ ಗುರುಸಿದ್ದಯ್ಯ (Gurusiddayya) ನೀಡಿದ ದೂರಿನ ಆಧಾತದ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಗುರುಸಿದ್ದಯ್ಯನವರ 6 ತಿಂಗಳ ಸಂಬಳ ಬಾಕಿ ಇತ್ತು. ಈ ಹಿನ್ನೆಲೆಯಲ್ಲಿ ಬಾಕಿ ಮಂಜೂರಾತಿ ಹಾಗೂ ಮರು ನೇಮಕಕ್ಕೆ ರೂ. ಹದಿನೇಳು ಸಾವಿರ (senenteen thousand) ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪ್ರೀತಿರಾಜ್ ಧರಿಯಾಪುರದ ಉಪ್ಪಿನಂಗಡಿಯಲ್ಲಿರುವ ಮನೆಯಲ್ಲಿ ಫೋನ್ ಪೇ ಮೂಲಕ ಹಣ ಪಡೆಯುತ್ತಿದ್ದಾಗ ಪೊಲೀಸರು ಬಂಧಿಸಿದ್ದು, ಆರೋಪಿ PDO ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಅರುಣ್ ಕುಮಾರ್, ಸಿಬ್ಬಂದಿಗಳಾದ ಮಸೂದ್, ಮಲ್ಲಿನಾಥ್, ಬಸವರಾಜ್, ಸಂತೋಷ್, ಮಧುಮತಿ, ಪ್ರಮೋದ್ ಅವರನ್ನೊಳಗೊಂಡ ತಂಡ ದಾಳಿ ನಡೆಸಿದೆ.