ಈ ರಕ್ತ ಗುಂಪು ಹೊಂದಿರುವವರು ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚು ತುತ್ತಾಗುತ್ತಾರೆ.!

WhatsApp
Telegram
Facebook
Twitter
LinkedIn

 

ನಾವು ಜೀವಂತವಾಗಿರಬೇಕೆಂದರೆ ನಮ್ಮ ಹೃದಯ  ಆರೋಗ್ಯವಾಗಿರಬೇಕು. ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಜೀವನಶೈಲಿಯಿಂದ ಬರುತ್ತವೆ. ಜೊತೆಗೆ ಇತರ ಕಾರಣಗಳೂ ಇರಬಹುದು. ಇದಲ್ಲದೇ ಕೆಲವು ನಿರ್ದಿಷ್ಟ ರಕ್ತದ ಗುಂಪು ಕೂಡ ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ.

ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಅನೇಕ ಅಂಶಗಳಲ್ಲಿ ರಕ್ತದ ಗುಂಪು ಕೂಡ ಸೇರಿದೆ. ಕೆಲವು ನಿರ್ದಿಷ್ಟ ರಕ್ತದ ಗುಂಪುಗಳನ್ನು ಹೊಂದಿರುವ ಜನರು ಇತರರಿಗಿಂತ ಹೆಚ್ಚು ಹೃದಯ ಸಂಬಂಧಿ ಕಾಯಿಲೆಗಳ ಅಪಾಯಗಳನ್ನು ಹೊಂದಿರುತ್ತಾರೆ. ಹಾಗಾಗಿ ತಪ್ಪದೇ ನಮ್ಮ ರಕ್ತದ ಗುಂಪು ಯಾವುದು ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.

ರಕ್ತದ ಗುಂಪು ಮತ್ತು ಹೃದ್ರೋಗದ ನಡುವಿನ ಸಂಬಂಧ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. ಓ ರಕ್ತದ ಗುಂಪನ್ನು ಹೊಂದಿರುವವರಿಗಿಂತ ಎ ಮತ್ತು ಬಿ ಗುಂಪಿಗೆ ಸೇರಿದ ಜನರು ಹೆಚ್ಚಾಗಿ ಹೃದ್ರೋಗದಿಂದ ಬಳಲುತ್ತಾರೆ. ವಾಸ್ತವವಾಗಿ, A ಮತ್ತು B ಗುಂಪಿನ ಜನರು ತಮ್ಮ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೊಂದಿರುತ್ತಾರೆ. ಹಾಗಾಗಿ ಈ ರಕ್ತದ ಗುಂಪಿಗೆ ಸೇರಿದವರು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದಾಗ್ಯೂ ಎ ಮತ್ತು ಬಿ ಗುಂಪಿನ ಜನರ ಬಿಪಿ, ಓ ಗುಂಪಿನವರಿಗಿಂತ ಕಡಿಮೆ ಇರುತ್ತದೆ.

ತಜ್ಞರು ಹೇಳುವ ಪ್ರಕಾರ ಅತ್ಯಂತ ಅಪರೂಪದ ಗುಂಪು ಎಂದು ಕರೆಯಲ್ಪಡುವ ಓ ಗುಂಪಿನ ಜನರು ಕಡಿಮೆ ಹೃದಯ ಸಂಬಂಧಿ ಅಪಾಯಗಳನ್ನು ಹೊಂದಿರುತ್ತಾರೆ. ಈ ಅಧ್ಯಯನದಲ್ಲಿ, ಇತರ ಗುಂಪುಗಳಿಗೆ ಹೋಲಿಸಿದರೆ, O ರಕ್ತದ ಗುಂಪಿನ ಜನರಲ್ಲಿ ಹೃದಯಾಘಾತ ಮತ್ತು ಹೃದಯ ವೈಫಲ್ಯದ ಅಪಾಯವು ಶೇಕಡಾ 10 ರಷ್ಟು ಕಡಿಮೆಯಾಗಿರುತ್ತದೆ.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon