ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಪ್ರಸಕ್ತ ಹಣಕಾಸು ವರ್ಷದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿದೆ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಈಗ ಉದ್ಯೋಗಿಗಳಿಗೆ ಮೊದಲಿಗಿಂತ ಶೇಕಡಾ 0.10 ರಷ್ಟು ಹೆಚ್ಚಿನ ಬಡ್ಡಿ ಸಿಗಲಿದೆ. ಹೀಗಾಗಿ ಇನ್ಮುಂದೆ ನಿಮ್ಮ ಪಿಎಫ್ ಖಾತೆಗೆ 8.25% ಬಡ್ಡಿ ದರವನ್ನು ನೀಡಲಾಗುತ್ತದೆ. ಇಪಿಎಫ್‌ಒದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (ಸಿಬಿಟಿ) ಶನಿವಾರ ನಡೆದ ಸಭೆಯಲ್ಲಿ 2023-24ಕ್ಕೆ ಇಪಿಎಫ್‌ಗೆ ಶೇಕಡಾ 8.25 ಬಡ್ಡಿದರವನ್ನು ನೀಡಲು ನಿರ್ಧರಿಸಿದೆ.
CBT ನಿರ್ಧಾರದ ನಂತರ, 2023-24ರ EPF ಠೇವಣಿಗಳ ಮೇಲಿನ ಬಡ್ಡಿ ದರವನ್ನು ಅನುಮೋದಿಸಲು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಿದೆ. ಕಳೆದ ವರ್ಷ ಮಾರ್ಚ್ 28ರಂದು, ಇಪಿಎಫ್‌ಒ 2022-23ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಿಗೆ ಶೇಕಡಾ 8.15 ರ ಬಡ್ಡಿ ದರವನ್ನು ಘೋಷಿಸಿತ್ತು. ಆದರೆ EPFO ಆರ್ಥಿಕ ವರ್ಷ 2022ರಲ್ಲಿ 8.10% ಬಡ್ಡಿಯನ್ನು ನೀಡಿತ್ತು.