ಬೆಂಗಳೂರು : ಗಣರಾಜ್ಯೋತ್ಸವ ಹಿನ್ನೆಲೆ 217 ನೇ ಫಲಪುಷ್ಪ ಪ್ರದರ್ಶನ ಲಾಲ್ ಬಾಗ್ ನಲ್ಲಿ ಆಯೋಜನೆ ಮಾಡಲಾಗಿದೆ. ಮಹರ್ಷಿ ವಾಲ್ಮೀಕಿಯವರಿಗೆ ತೋಟಗಾರಿಕೆ ಇಲಾಖೆಯಿಂದ ಅರ್ಪಣೆ ಮಾಡಿದ್ದು ವಾಲ್ಮೀಕಿಯವರ ಜೀವನ ಚರಿತ್ರೆ ಹಾಗೂ ರಾಮಾಯಣ ಪುಸ್ತಕದ ಅನಾವರಣ ಮಾಡಲಿದೆ.
ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಫ್ಲವರ್ ಶೋ ಇಂದಿನಿಂದ 27ನೇ ತಾರೀಖಿನ ವರೆಗೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯರಿಂದ ಅಧಿಕೃತ ಉದ್ಘಾಟನೆ ಆಗಲಿದೆ.