ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಗೂಳ್ಯ ಗೊಲ್ಲರಹಟ್ಟಿ ಗ್ರಾಮದ ಜಿ.ಕೆ.ಸಂತೋಷ್ ಕುಮಾರ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕನ್ನಡ ವಿಷಯದಲ್ಲಿ ಪಿಹೆಚ್‍ಡಿ ಪದವಿಗೆ ಅಂಗೀಕರಿಸಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಡಾ.ಜಿ.ಈ.ಅಜ್ಜಪ್ಪ ಅವರ ಮಾರ್ಗದರ್ಶನದಲ್ಲಿ “ಮೌಖಿಕ ಕನ್ನಡ ಮಹಾಕಾವ್ಯಗಳಲ್ಲಿ ಲಿಂಗ ತಾರತಮ್ಯತೆ (ಆಯ್ದ ಪಠ್ಯಗಳು) ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪಿಹೆಚ್‍ಡಿ ಪದವಿ ನೀಡಲಾಗಿದೆ.