ಚಿತ್ರದುರ್ಗ: ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ಎಚ್.ಎಸ್.ನವೀನ್ ಅವರು ಮಂಡಿಸಿದ “ಯಂತ್ರ ಕಲಿಕೆ ಅಲ್ಗಾರಿದಮ್ಗಳನ್ನು ಬಳಸಿಕೊಂಡು ಅಡಿಕೆ ರೋಗ ಪತ್ತೆಗಾಗಿ ಹೈಬ್ರಿಡ್ ವರ್ಗೀಕರಣದೊಂದಿಗೆ ಮಣ್ಣಿನ ಶಿಫಾರಸು ಮತ್ತು ನೀರಾವರಿ ನಿರ್ವಹಣೆಗೆ ಒಂದು ಸ್ಮಾರ್ಟ್ ಚೌಕಟ್ಟು” ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿದೆ.
ಆಕ್ಸ್ಫರ್ಡ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಇ.ಸರವಣ ಕುಮಾರ್ ಮಾರ್ಗದರ್ಶನ ನೀಡಿದ್ದರು. ಡಾ. ನವೀನ್ ಎಚ್ ಎಸ್ ಪ್ರಸ್ತುತ ಬೆಂಗಳೂರಿನ ವೇಮನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.































