ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾನಿಲಯ ಚಿತ್ರದುರ್ಗ ಜ್ಞಾನ ಗಂಗೋತ್ರಿಯ ಸ್ನಾತಕೋತ್ತರ ಕೇಂದ್ರದಲ್ಲಿ ಅರ್ಥಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಬೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ದೇವರಾಜ ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯವು ಪಿಹೆಚ್ಡಿ ಪದವಿ ನೀಡಿದೆ.
ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು ಮತ್ತು ಪ್ರಾಧ್ಯಾಪಕರಾದ ಡಾ.ಬಿ.ಪಿ.ವೀರಭದ್ರಪ್ಪರವರ ಮಾರ್ಗದರ್ಶನದಲ್ಲಿ “The Performance Analysis of NUHM: With Special Reference to Urban Areas of Chitradurga District” ಎಂಬ ಸಂಶೋಧನಾ ವಿಷಯದಲ್ಲಿ ಮಹಾ ಪ್ರಬಂಧವನ್ನು ಮಂಡಿಸಿದ್ದು, ಇವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದ್ದು, ಮುಂದಿನ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪ್ರಮಾಣ ಪತ್ರ ನೀಡಲಿದೆ.
				
															
                    
                    
                    
                    































