ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಅವರಿಗೆ ಆರೋಗ್ಯದ ಸಮಸ್ಯೆ ಹಿನ್ನೆಲೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿದ್ದ ನಟ ದರ್ಶನ್ ಅವರು ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾದ ದಿನದಿಂದಲೂ ದರ್ಶನ್ ಕುರಿತಾದ ಯಾವುದೇ ಫೋಟೋಗಳು ಹೊರ ಬಂದಿರಲಿಲ್ಲ. ಸದ್ಯ ದರ್ಶನ್ ಚಿಕಿತ್ಸೆ ಪಡೆಯುತ್ತಿರು ಎಕ್ಸ್‌ಕ್ಲೂಸಿವ್ ಫೋಟೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ. ಸದ್ಯ ಲಭ್ಯವಾಗಿರುವ ಫೋಟೋದಲ್ಲಿ ದರ್ಶನ್ ಅವರು ಚಿಕಿತ್ಸೆ ಪಡೆಯುವ ಬೆಡ್ ಮೇಲೆ ಮಲಗಿರುವಂತೆ ಕಂಡು ಬಂದಿದೆ. ಮಾತ್ರವಲ್ಲ ಅವರು ತೀವ್ರವಾಗಿ ಬಳಲುತ್ತಿರುವಂತೆ ಫೋಟೊದಲ್ಲಿ ಕಂಡು ಬಂದಿದೆ. ಕಳೆದ 30 ದಿನದಿಂದ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರಿಗೆ ಇದೇ ವಾರದಲ್ಲಿ ಶಸ್ತ್ರ ಚಿಕಿತ್ಸೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
