ಆ್ಯಂಕರ್ ಅನುಶ್ರೀ ಅವರಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿಬಂದಿದೆ. ಈ ಹಿಂದೆ ಹಲವು ಬಾರಿ ಈ ಬಗೆಗಿನ ಸುದ್ದಿ ಹರಿದಾಡಿದ್ದರೂ ಯಾರೂ ನಂಬಿರಲಿಲ್ಲ. ಆದರೆ ಇದೀಗ ಆ ಸುದ್ದಿ ನಿಜವಾಗಿದೆ. ಕೊಡಗು ಮೂಲದ ರೋಷನ್ ಎಂಬವರ ಜೊತೆಗಿನ ಫೊಟೋವೊಂದು ಇದೀಗ ವೈರಲ್ ಆಗುತ್ತಿದೆ.
ರೋಷನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿದ್ದಾರೆ. ಅನುಶ್ರೀ ಅವರು ಇನ್ಸ್ಟಾಗ್ರಾಮ್ನಲ್ಲಿ ರೋಷನ್ನ ಫಾಲೋ ಕೂಡ ಮಾಡುತ್ತಿದ್ದಾರೆ. ಆದರೆ, ಅವರು ಡಿಪಿಗೆ ತಮ್ಮ ಫೋಟೋನ ಹಾಕಿಲ್ಲ. ಒಂದು ನಾಯಿ ಮರಿ ಫೋಟೋ ಡಿಸ್ಪ್ಲೇನಲ್ಲಿ ಇದೆ. ಹೀಗಾಗಿ, ಅವರ ಗುರುತು ಯಾರಿಗೂ ಸಿಕ್ಕಿರಲಿಲ್ಲ. ಈಗ ರೋಷನ್ ಜೊತೆ ಅನುಶ್ರೀ ಇರೋ ಫೋಟೋ ವೈರಲ್ ಆಗಿದೆ.
ಕಾರ್ಯಕ್ರಮ ಒಂದರಲ್ಲಿ ಅನುಶ್ರೀ ಹಾಗೂ ರೋಷನ್ ಕಾಣಿಸಿಕೊಂಡಿದ್ದಾರೆ. ಪೂಜೆ ಮಾಡಿಸುವಾಗ ಕೆಲವರು ಇದರ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಎಲ್ಲ ಕಡೆಗಳಲ್ಲಿ ಇದು ವೈರಲ್ ಆಗಿದೆ. ಈ ಫೋಟೋ ಫ್ಯಾನ್ ಪೇಜ್ಗಳಲ್ಲಿ ಹರಿದಾಡುತ್ತಿದೆ. ಈ ವಿಚಾರ ತಿಳಿದು ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಆಗಸ್ಟ್ 28ರಂದು ಅನುಶ್ರೀ ಹಾಗೂ ರೋಷನ್ ವಿವಾಹ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ನೂ ಈ ವಿಚಾರವನ್ನು ಅನುಶ್ರೀ ಅವರು ಅಧಿಕೃತ ಮಾಡಿಲ್ಲ. ಈ ಬಗ್ಗೆ ಅವರ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಶೀಘ್ರವೇ ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅವರು ಮಾಹಿತಿ ನೀಡುವ ಸಾಧ್ಯತೆ ಇದೆ.