ಉತ್ತರ ಪ್ರದೇಶದ ಮೀರತ್ನಲ್ಲಿ ನಾಗರ ಹಾವು ಅಮಿತ್ನನ್ನು ಕಚ್ಚಿದ್ದು ನಿಜ ಆದ್ರೆ ಅಮಿತ್ ಹಾವು ಕಚ್ಚೋದಕ್ಕೂ ಮುನ್ನವೇ ಜೀವ ಬಿಟ್ಟಿದ್ದ. ಅಮಿತ್ ಜೀವ ಬಿಡೋಕು ಮುಂಚೆ, ಹಾವು ಅಮಿತ್ ಬಳಿ ಬರುವ ಮುಂಚೆ, ಅಮಿತ್ ಪಕ್ಕದಲ್ಲೇ ಇದ್ದವಳು ಅಮಿತ್ ಪತ್ನಿ ರಮಿತಾ.ರಮಿತಾ, ಅಮಿತ್ನ ಮಡದಿ. ಆಕೆಗೆ ಅಮರದೀಪ್ ಎಂಬ ಪರ ಪುರುಷನ ಜೊತೆ ಅಕ್ರಮ ಸಂಬಂಧ ಇತ್ತು. ಈ ವಿಚಾರ ಗೊತ್ತಾಗಿ ಅಮಿತ್ ರಮಿತಾಳಿಗೆ ವಾರ್ನಿಂಗ್ ಕೊಟ್ಟಿದ್ದ. ಹಾಗೆ ಆ ಹುಡುಗನಿಗೂ ಎಚ್ಚರಿಕೆ ಕೊಟ್ಟಿದ್ದ. ಆದರೆ ರಮಿತಾಳಿಗೆ ಗಂಡನ ವಾರ್ನಿಂಗ್ ತಲೆಗೇರಿಲಿಲ್ಲ.
ಆ ದಿನ ಅಮಿತ್ ಊಟ ಮುಗಿಸಿ ಮಲಗಿದ್ದಾಗ, ರಮಿತಾ ತನ್ನ ಪ್ರಿಯಕರನ ಕರೆಸಿದ್ದಳು. ಇಬ್ಬರು ಮಲಗಿದ್ದ ಅಮಿತ್ನ ಉಸಿರುಗಟ್ಟಿಸಿ ಕೊಂದೇ ಬಿಟ್ಟಿದ್ದರು.ಗಂಡನನ್ನು ಕೊಲೆ ಮಾಡಿದ ಬಳಿಕ ರಮಿತಾಳಿಗೆ ಬಂಧನದ ಭೀತಿ ಶುರುವಾಗಿ, ಕೊಲೆಯನ್ನು ಆಕಸ್ಮಿಕ ಸಾವಂತೆ ಬಿಂಬಿಸೋಕೆ ಸಿದ್ಧಳಾಗಿದ್ದಳು. ಆಗ ಆಕೆಗೆ ಬಂದಿದ್ದ ಉಪಾಯವೇ ಈ ನಾಗರಹಾವು. ಸತ್ತು ಬಿದ್ದಿದ್ದವನ ಬೆಡ್ ಮೇಲೆ ಹಾವನ್ನು ಬಿಟ್ಟು, ಅದು ಗಂಡನನ್ನ ಕಚ್ಚುವವರೆಗೂ ಕಾದು ನೋಡಿ. ಹಾವು 10 ಬಾರಿ ಕಚ್ಚಿದ ಮೇಲೆ ಹಾವು, ಹಾವು ಅಂತ ಕೂಗಾಡಿದ್ದಾಳೆ.
ಆ ದಿನ ಅಮಿತ್ ನೋಡಿದವರೆಲ್ಲಾ ಮನೆಯವರೂ ಸೇರಿ, ಹಾವು ಕಚ್ಚಿದರಿಂದಲೇ ಅಮಿತ್ ಜೀವ ಹೋಗಿದೆ ಅಂತ ಅಂದುಕೊಂಡಿದ್ದರು. ಆದ್ರೆ ಮಾಸ್ಟರ್ ಪ್ಲಾನ್ ಮಾಡಿ, ಗಂಡನ ಮರ್ಡರ್ ಮಾಡಿದ್ದ, ರಮಿತಾಳ ರಮಿಸುವ ಆಟಕ್ಕೆ ಬ್ರೇಕ್ ಬೀಳಿಸಿದ್ದು ಪೋಸ್ಟ್ ಮಾರ್ಟ್ಂ ರಿಪೋರ್ಟ್.
ಗಂಡನ ಕೊಂದು ಪ್ರಿಯಕರನಿಗೆ ವಶವಾಗಬೇಕೆಂದಿದ್ದ ರಮಿತಾ, ಅತ್ತ ಗಂಡನೂ ಇಲ್ಲದೇ, ಇತ್ತ ಪ್ರೇಮಿಯೂ ಇಲ್ಲದೇ ಕೊಲೆಗಾತಿಯಾಗಿ ಜೈಲು ಸೇರಿದ್ದಾಳೆ. ರಮಿತಾಳ ಕ್ರೈಮ್ ಮೈಂಡ್ ಬಗ್ಗೆ ತಿಳಿದು ಇಡೀ ಊರಿನ ಜನ ದಂಗಾಗಿದ್ದಾರೆ.