ಅಮೆರಿಕ : ಫಿಲಡೆಲ್ಫಿಯಾದಲ್ಲಿ ಮತ್ತೊಮ್ಮೆ ವಿಮಾನ ದುರಂತ ಸಂಭವಿಸಿದೆ. ಸಣ್ಣ ವಿಮಾನವೊಂದು ಪತನಗೊಂಡ ನಂತರ ಹಲವು ಮನೆಗಳಿಗೆ ಬೆಂಕಿ ಬಿದ್ದಿದೆ. ಈ ವಿಮಾನದಲ್ಲಿ ಇಬ್ಬರು ಇದ್ದರು. ಶುಕ್ರವಾರ ಸಂಜೆ ರೂಸ್‌ವೆಲ್ಟ್ ಮಾಲ್ ಬಳಿ ಈ ಅಪಘಾತ ಸಂಭವಿಸಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಹೇಳಿದೆ.
ಪತನಗೊಂಡ ವಿಮಾನವು ಲಿಯರ್ ಜೆಟ್ 55 ವಿಮಾನವಾಗಿದೆ. ವಿಮಾನವು ಸ್ಪ್ರಿಂಗ್‌ಫೀಲ್ಡ್ ಬ್ರಾನ್ಸನ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿತ್ತು. ವಿಮಾನ ಅಪಘಾತದ ನಂತರ ಬಿದ್ದ ಅವಶೇಷಗಳಿಂದ ಕೆಲವು ಮನೆಗಳು ಮತ್ತು ಅನೇಕ ಕಾರುಗಳು ಬೆಂಕಿಗೆ ಆಹುತಿಯಾಗಿವೆ.
ವಿಮಾನವು ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆ ಟೇಕಾಫ್ ಆಗಿದ್ದು, ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ರಾಡಾರ್‌ನಿಂದ ಕಣ್ಮರೆಯಾಯಿತು . ವಿಮಾನದಲ್ಲಿರುವ ಇಬ್ಬರು ಬದುಕಿದ್ದಾರೋ ಇಲ್ಲವೋ ಎಂಬುದರ ಕುರಿತು ಮಾಹಿತಿ ಇನ್ನೂ ಇಲ್ಲ.