ಬೆಳಗಾವಿ: ಕೆಲ ದಿನಗಳ ಹಿಂದೆಯಷ್ಟೇ SSLC ಪರೀಕ್ಷೆ ನಡೆದಿದ್ದು, ಈಗ ಉತ್ತರ ಪತ್ರಿಕೆಯ ಮೌಲ್ಯಮಾಪನ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬನ ಮನವಿ ಎಲ್ಲಡೆ ವೈರಲ್ ಆಗುತ್ತಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ವಿದ್ಯಾರ್ಥಿಯೊಬ್ಬ ಉತ್ತರ ಪ್ರತಿಕೆಯಲ್ಲಿ ಚೀಟಿಯೊಂದನ್ನು ಇಟ್ಟು ಮೌಲ್ಯಮಾಪಕರ ಬಳಿ ಮನವಿ ಮಾಡಿಕೊಂಡಿದ್ದಾನೆ. ದಯವಿಟ್ಟು ನನ್ನನ್ನು ಪಾಸ್ ಮಾಡಿಸಿ, ನಾನು ಪಾಸ್ ಆದರೆ ನನಗೆ ನನ್ನ ಪ್ರೀತಿ ಸಿಗುತ್ತದೆ ಎಂದು ಆತ ಹೇಳೆಕೊಂಡಿದ್ದಾನೆ. ಸದ್ಯ ಈತ ಬರೆದ ಪತ್ರ ಎಲ್ಲೆಡೆ ವೈರಲ್ (Viral News) ಆಗುತ್ತಿದೆ.
ಬೆಳಗಾವಿಯಲ್ಲಿಯೇ ಈ ರೀತಿಯ ಎರಡು ಪತ್ರಗಳು ಬಂದಿವೆ. ಅದರಲ್ಲಿ ಒಬ್ಬ ವಿದ್ಯಾರ್ಥಿ ಪ್ಲೀಸ್ ಸಾರ್ ದಯವಿಟ್ಟು, ನನ್ನನ್ನು ಪಾಸ್ ಮಾಡಿ, ನಮ್ಮ ಕಾಲಿಗೆ ಬೀಳುತ್ತೇನೆ. ನಾನು ಪಾಸ್ ಆದರೆ ಅಷ್ಟೇ ನನ್ನ ಹುಡುಗಿ ನನಗೆ ಸಿಕ್ತಾಳೆ, ನನ್ನ ಲವ್ ಸಕ್ಸ್ಸ್ ಆಗುತ್ತೆ. ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ” ಎಂದು ವಿದ್ಯಾರ್ಥಿ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ. ಅಷ್ಟೇ ಅಲ್ಲದೆ ಆದ ಉತ್ತರ ಪ್ರತಿಕೆಯ ಜೊತೆಗೆ 500 ರೂ. ಲಗತ್ತಿಸಿದ್ದಾನೆ. ಈತನ ಮನವಿ ಇದೀಗ ಫುಲ್ ವೈರಲ್ ಆಗಿದೆ.
ಮತ್ತೊಂದು ಪತ್ರದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಇದೇ ರೀತಿಯ ಮನವಿ ಮಾಡಿಕೊಂಡಿದ್ದು, ಸರ್ ದಯವಿಟ್ಟು, ನನ್ನನ್ನು ಪಾಸ್ ಮಾಡಿ, ನನಗೆ ಮುಂದೆ ಓದಬೇಕೆಂಬ ಹಂಬಲವಿದೆ. ನಾನು ಫೇಲ್ ಆದರೆ ನನ್ನ ಮನೆಯಲ್ಲಿ ಕಾಲೇಜಿಗೆ ಕಳಿಸುವುದಿಲ್ಲ. ಸರ್, ಈ 500 ರೂಪಾಯಿಯಿಂದ ಚಹಾ ಕುಡಿಯಿರಿ, ದಯವಿಟ್ಟು ನನಗೆ ಪಾಸ್ ಮಾಡಿ” ಎಂದು ಬರೆದಿದ್ದಾರೆ. ಕೆಲವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಶಿಕ್ಷಕರು ಸಹಾಯ ಮಾಡಿದರೆ ಹೆಚ್ಚಿನ ಹಣವನ್ನು ನೀಡುವುದಾಗಿ ಹೇಳಿದ್ದು, ವರದಿಯಾಗಿದೆ.
ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದ್ದರೆ ಶೇಕಡಾ 35 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ) ಕೋವಿಡ್ ಪೂರ್ವದ ದಿನಗಳಲ್ಲಿ ಜಾರಿಯಲ್ಲಿದ್ದ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತಂದಿದೆ. ಕಳೆದ ವರ್ಷ, ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಬಡ್ತಿ ಪಡೆಯಲು ಸಹಾಯ ಮಾಡುವುದಕ್ಕಾಗಿ ಮಂಡಳಿಯು ಕನಿಷ್ಠ ಉತ್ತೀರ್ಣ ಅಂಕಗಳನ್ನು ಶೇಕಡಾ 25 ಕ್ಕೆ ಇಳಿಕೆ ಮಾಡಿತ್ತು ಮತ್ತು ಗ್ರೇಸ್ ಮಾರ್ಕ್ಗಳನ್ನು ನೀಡಿತ್ತು.