ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ 70 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
ಕಳೆದ ಕೆಲವು ವರ್ಷಗಳಿಂದ ಈ ದಿನದಂದು ಮಮತಾ ಬ್ಯಾನರ್ಜಿಯವರಿಗೆ ಶುಭ ಹಾರೈಸುವ ಒಂದೇ ಒಂದು ಅವಕಾಶವನ್ನೂ ಪ್ರಧಾನಿ ಕಳೆದುಕೊಂಡಿಲ್ಲ. ಬಹುತೇಕ ಪ್ರತಿ ವರ್ಷವೂ ಈ ದಿನದಂದು ಪ್ರಧಾನಿಯವರು ಮಮತಾ ಬ್ಯಾನರ್ಜಿಯವರಿಗೆ ಶುಭ ಹಾರೈಸುತ್ತಾರೆ.
ಪಶ್ಚಿಮ ಬಂಗಾಳದ ಸಿಎಂ ಮಮತಾ ದೀದಿ ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.