ನವದೆಹಲಿ :ಸಾರ್ವಜನಿಕರಿಂದ ತಿರಸ್ಕೃತರಾಗಿರುವ ಕೆಲವರು ಬೆರಳೆಣಿಕೆಯ ಜನರು ಗೂಂಡಾಗಿರಿಯ ಮೂಲಕ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಪ್ರಧಾನಿ ಮೋದಿ ಹೇಳಿದರು.
ಸಂಸತ್ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಸತ್ ಹೊರಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಕೆಲವರು ಹೊಸ ಸಂಸದರ ಆಲೋಚನೆಗಳು, ಶಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ, ಸಾರ್ವಜನಿಕರು ಅವರನ್ನು ಗಮನಿಸುತ್ತಿದ್ದಾರೆ, ಇಂತಹವರು ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲ. ಪ್ರತಿಪಕ್ಷಗಳು ಸಾರ್ವಜನಿಕರ ಭಾವನೆಗಳಿಗೆ ಗೌರವ ನೀಡಬೇಕು ಎಂದು ಮೋದಿ ಹೇಳಿಕೆ ನೀಡಿದ್ದಾರೆ.
ಹೊಸ ಆಲೋಚನೆಗಳು ಮತ್ತು ಶಕ್ತಿಯನ್ನು ಹೊಂದಿರುವ ಹೊಸ ಸಂಸದರಿಗೆ ಮಾತನಾಡಲು ಬಿಡಬೇಕು, ಹೊಸ ಸಂಸದರು ಹೊಸ ಆಲೋಚನೆಗಳನ್ನು, ಹೊಸ ಶಕ್ತಿಯನ್ನು ತರುತ್ತಾರೆ , ಕೆಲವರು ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ, ಅವರಿಗೆ ಸದನದಲ್ಲಿ ಮಾತನಾಡುವ ಅವಕಾಶವೂ ಸಿಗುತ್ತಿಲ್ಲ ಎಂಬುವುದಾಗಿ ಪ್ರಧಾನಿ ಬೇಸರ ವ್ಯಕ್ತಪಡಿಸಿದರು.