ಬೆಳಗಾವಿ: ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಲು ಕರೆದುಕೊಂಡು ಹೋಗಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಉತ್ತರ ಕರ್ನಾಟಕದ ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
ಅ. 24ರಂದು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ನಡೆದ ಕಾರ್ಯಕ್ರಮಕ್ಕೆ ಮ್ಯೂಸಿಕ್ ಮೈಲಾರಿ, ಅಥಣಿ ಶಂಕರ, ದಾನವಿ ಸಿಂಗರ್ ಅವರು ನೃತ್ಯ ಮಾಡಲು ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿದ್ದರು. ಕಾರ್ಯಕ್ರಮ ಮುಗಿದ ನಂತರ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು.
ಈ ವೇಳೆ ಮ್ಯೂಸಿಕ್ ಮೈಲಾರಿಯೊಂದಿಗೆ ಸಹಕರಿಸುವಂತೆ ದಾನವಿ ಸಿಂಗರ್ ಬಾಲಕಿಗೆ ಒತ್ತಾಯಿಸಿದ್ದ. ತಿರಸ್ಕರಿಸಿದಾಗ ಬಾಲಕಿಯ ಮೇಲೆ ಅಥಣಿ ಶಂಕರ ಹಲ್ಲೆ ಮಾಡಿದ್ದು, ಮ್ಯೂಸಿಕ್ ಮೈಲಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.

































