ಸಾಫ್ಟ್ ಡ್ರಿಂಕ್ ನಲ್ಲಿ ವಿಷಕಾರಕ ಅಂಶ: ಕೆಲವು ದೇಶಗಳಿಂದ ಸ್ಟಾಕ್ ವಾಪಾಸ್ ತರಿಸಿಕೊಂಡ ಕೋಕಾಕೋಲಾ ಕಂಪೆನಿ! ಭಾರತದ ಕತೆ ಏನು?

WhatsApp
Telegram
Facebook
Twitter
LinkedIn

ಸಾಫ್ಟ್ ಡ್ರಿಂಕ್ ಆರೋಗ್ಯಕ್ಕೆ ಹಾನಿಕರ ಎಂದು ಎಷ್ಟೇ ಜಗೃತಿ ಮೂಡಿಸಿದರೂ ಬಹುತೇಕ ಜನರು ಕ್ಯಾರೇ ಎನ್ನುತ್ತಿಲ್ಲ. ಆದರೆ ಈಗ ಕೋಕೋಕೋಲಾದಲ್ಲಿ ತೀವ್ರ ಪ್ರಮಾಣದ ವಿಷಕಾರಕ ಅಂಶಗಳು ಸೇರಿಕೊಂಡ ಹಿನ್ನೆಲೆಯಲ್ಲಿ ಕಂಪೆನಿ ತನ್ನ ಉತ್ಪನ್ನಗಳಾದ ಫಾಂಟಾ, ಮಿನಿಟ್ ಮೇಡ್, ಟ್ರೋಪಿಕೋ ಬ್ರ್ಯಾಂಡ್ ಗಳನ್ನು ಮಾರುಕಟ್ಟೆಯಿಂದ ವಾಪಾಸ್ ಪಡೆದುಕೊಳ್ಳುತ್ತಿದೆ. ಈ ಎಲ್ಲಾ ಪಾನೀಯಗಳು ಕ್ಲೋರೇಟ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕಂಪೆನಿ ಈ ನಿರ್ಧಾರ ತೆಗೆದುಕೊಂಡಿದೆ. ನೆದರ್ಲ್ಯಾಂಡ್ಸ್, ಬ್ರಿಟನ್, ಬೆಲ್ಜಿಯಂ, ಜರ್ಮನಿ, ಲಕ್ಸೆಂಬರ್ಗ್ ಮತ್ತು ಫ್ರಾನ್ಸ್‌ ದೇಶಗಳಲ್ಲಿ ವಿತರಣೆಯಾಗಿರುವ ಪಾನೀಯಗಳನ್ನು ವಾಪಾಸ್ ತರಿಸಿಕೊಂಡಿದೆ.

ಕ್ಲೊರೇಟ್ ಎಂದರೇನು?

ಕ್ಲೊರೇಟ್ ಕ್ಲೋರಿನ್ ಸೋಂಕು ನಿವಾರಕಗಳ ಉಪ ಉತ್ಪನ್ನ. ಇದನ್ನು ನೀರಿನ ಸಂಸ್ಕರಣೆ ಮತ್ತು ಆಹಾರ ಸಂಸ್ಕರಣೆಯಲ್ಲಿ ಬಳಸಲಾಗುತ್ತದೆ. ‘ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ’ 2015 ರ ವರದಿಯ ಪ್ರಕಾರ  ಕ್ಲೋರೇಟ್ ಬಳಕೆ ಆರೋಗ್ಯಕ್ಕೆ ಅಪಾರ ಹಾನಿ ಮಾಡುತ್ತದೆ. ಮಕ್ಕಳ ಮೇಲೆಯೂ ಅಯೋಡಿಮ್ ಕೊರತೆ ಉಂಟು ಮಾಡುತ್ತದೆ.  ಅಥಾರಿಟಿಯ ಕಾನೂನಿನ ಪ್ರಕಾರ  ಕಂಪೆನಿ ತನ್ನ ಉತ್ಪನ್ನಗಳನ್ನು ವಾಪಾಸ್ ಪಡೆದಿದೆ. ಭಾರತದಲ್ಲಿ ತಯಾರಾಗುವ ಕೋಕ್ ಗಳಲ್ಲೂ ಕ್ಲೋರೇಟ್ ಬಳಸಲಾಗುತ್ತದೆ ಎನ್ನಲಾಗಿದೆ. ಆದರೆ ಇಲ್ಲಿನ ಫುಡ್ ಅಥಾರಿಟಿ ಈ ಕುರಿತು ಗಮನ ಹರಿಸುತ್ತಿಲ್ಲ, ಭಾರತದಲ್ಲಿಯೂ ಕೋಕ್ ಸೇರಿದಂತೆ ಹಲವು ಸಾಫ್ಟ್ ಡ್ರಿಂಕ್ ಉತ್ಪನ್ನಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸುವಂತೆ ಸೋಶಿಯಲ್ ಮೀಡಿಯ ಆಂದೋಲನ ಕೂಡ ಶುರುವಾಗಿದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon