ದೆಹಲಿ: ಪರಮಾಣು ಪರೀಕ್ಷೆಯಲ್ಲಿ ಪ್ರಮುಖಪಾತ್ರ ವಹಿಸಿದ್ದ ಹಿರಿಯ ಪರಮಾಣು ವಿಜ್ಞಾನಿ ಹಾಗೂ ಕ್ರಿಸ್ಟಲೋಗ್ರಫರ್ ಡಾ.ರಾಜಗೋಪಾಲ ಚಿದಂಬರಂ (89) ನಿಧನರಾಗಿದ್ದಾರೆ.
ಅವರು ಅಂತರರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ (IAEA) ಆಡಳಿತ ಮಂಡಳಿಗೆ 1994-95 ಅವಧಿಯ ಅಧ್ಯಕ್ಷರಾಗಿದ್ದರು. ಕೇಂದ್ರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿದ್ದರು.
1975ರ ಪರೀಕ್ಷೆ-1 ಹಾಗೂ 1998ರಲ್ಲಿ ನಡೆದ
ಪೋಖ್ರಾನ್-2 ಪರೀಕ್ಷೆಯ ಸಂಯೋಜಕರಾಗಿದ್ದರು.
ಇವರಿಗೆ ಪದ್ಮಶ್ರೀ (1975) ಹಾಗೂ ಪದ್ಮ ವಿಭೂಷಣ (1999) ಪ್ರಶಸ್ತಿಗಳು ಸಂದಿವೆ.