ಚಿತ್ರದುರ್ಗ: ಸೆಪ್ಟೆಂಬರ್ 10 ರಂದು ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 12.30 ರವರೆಗೆ ಚಿತ್ರದುರ್ಗ ನಗರದಲ್ಲಿ ಒಟ್ಟು 13 ಶಾಲಾ-ಕಾಲೇಜುಗಳಲ್ಲಿ 2022-23ನೇ ಸಾಲಿನ ಪೊಲೀಸ್ ಕಾನ್ಸ್ಟೇಬಲ್(ಸಶ್ತçಸ) ಲಿಖಿತ ಪರೀಕ್ಷೆ ನಡೆಯಲಿದೆ.
ಲಿಖಿತ ಪರೀಕ್ಷೆಗೆ 5760 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ರೀತಿಯ ಪುಸ್ತಕ, ಕೈ ಬರಹ ಚೀಟಿಗಳು, ಪೇಜರ್, ಕ್ಯಾಲ್ಕುಲೇರ‍್ಗಳನ್ನು, ಇಯರ್ ಪೋನ್, ಮೊಬೈಲ್‌ಗಳನ್ನು ಪರೀಕ್ಷೆಗೆ ತರಲು ನಿಷೇಧಿಸಲಾಗಿರುತ್ತದೆ. ಅಭ್ಯರ್ಥಿಗಳು ಬೆಲೆ ಬಾಳುವ ವಸ್ತು ಅಥವಾ ಸಾಮಾಗ್ರಿಗಳನ್ನು ಪರೀಕ್ಷಾ ಕೊಠಡಿಗೆ ತರುವಂತಿಲ್ಲ ಹಾಗೂ ತಮ್ಮ ವಸ್ತುಗಳಿಗೆ ತಾವೇ ಜವಾಬ್ದಾರರಾಗಿರುತ್ತಾರೆ.
ಅಭ್ಯರ್ಥಿಗಳು ಕರೆಪತ್ರವನ್ನು https://ksp.karnataka.govt.in or https://ksp-recruitment.in ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕರೆ ಪತ್ರದಲ್ಲಿ ನಮೂದಾಗಿರುವಂತೆ ಕಾಲೇಜಿನಲ್ಲಿ ಹಾಜರಿರಲು ಹಾಗೂ ಕರೆ ಪತ್ರದಲ್ಲಿ ನಮೂದಿಸಿರುವ ಸೂಚನೆಗಳನ್ನು ಪಾಲಿಸಬೇಕು ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.