ನಮ್ಮ ಸುತ್ತಲೂ ಸಾಮಾನ್ಯವಾಗಿ ಸಿಗುವ ದಾಳಿಂಬೆ ಹಣ್ಣು ತನ್ನಲ್ಲಿ ಹಲವಾರು ಆರೋಗ್ಯದಾಯಕ ಅಂಶಗಳನ್ನು ಹೊಂದಿದೆ. ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟು ಪ್ರಮಾಣದ ಪೋಷಕಾಂಶಗಳನ್ನು ಒದಗಿಸುತ್ತದೆಯೋ ಅದೇ ರೀತಿ ದಾಳಿಂಬೆ ಹಣ್ಣಿನ ಸಿಪ್ಪೆಯೂ ಹಲವು ಆರೋಗ್ಯದ ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ.
ಹೃದಯದ ಸಮಸ್ಯೆ ಪರಿಹಾರ
ದಾಳಿಂಬೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಇರುವ ಕಾರಣ ಹೃದಯಕ್ಕೆ ಮಾರಕ ಎನಿಸುವ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕಾರ್ಯನಿರ್ವಹಿಸುತ್ತದೆ ಮತ್ತು ಇದು ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ.
ಅಜೀರ್ಣದ ಸಮಸ್ಯೆ ಪರಿಹಾರಸಾಮಾನ್ಯವಾಗಿ ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಕಂಡುಬರುವ ಅಜೀರ್ಣದ ಸಮಸ್ಯೆಗೆ ದಾಳಿಂಬೆ ಸಿಪ್ಪೆಯು ಉತ್ತಮ ಔಷಧವಾಗಿದ್ದು, ಅತಿಸಾರ ಭೇದಿ ಉಂಟಾದಾಗ ಅಥವಾ ರಕ್ತ ಭೇದಿ ಸಮಸ್ಯೆ ಉಂಟಾದಾಗ ಒಣಗಿಸಿದ ದಾಳಿಂಬೆಯ ಸಿಪ್ಪೆಯನ್ನು ಲಿಂಬೆ ಹಣ್ಣಿನಲ್ಲಿ ತೇದಿ ಚೂರ್ಣವಾಗಿ ಮಾಡಿ ಸೇವಿಸುವುದರಿಂದ ಅತಿಸಾರದ ಸಮಸ್ಯೆ ಶೀರ್ಘವಾಗಿ ಗುಣಮುಖವಾತ್ತದೆ.
ಮೂಳೆಗಳ ಆರೋಗ್ಯಕ್ಕೆ ಸಹಕಾರಿದಾಳಿಂಬೆ ಹಣ್ಣಿನಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಮೂಳೆಗಳ ಸಾಂದ್ರತೆಯನ್ನು ಹೆಚ್ಚು ಮಾಡುತ್ತದೆ . ಅಧ್ಯಯನಗಳು ಹೇಳುವಂತೆ ದಾಳಿಂಬೆ ಹಣ್ಣಿನ ಸಿಪ್ಪೆಯ ಡಿಕಾಕ್ಷನ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಮೂಳೆಗಳ ಆರೋಗ್ಯ ಅತ್ಯುತ್ತಮವಾಗಿರುವ ಮೂಲಕ ಓಸ್ಟಿಯೋಪೋರೋಸಿಸ್ ಎಂಬ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.2 ಚಮಚ ದಾಳಿಂಬೆ ಹಣ್ಣಿನ ಪುಡಿಯನ್ನು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಮತ್ತು ಪುಡಿ ಉಪ್ಪು ಹಾಕಿ ಸೇವಿಸುವುದರಿಂದ ಮೂಳೆಗಳು ಸದೃಢವಾಗಿರುತ್ತದೆ.
ಹಲ್ಲಿನ ಆರೋಗ್ಯಕ್ಕೆ ಸಹಕಾರಿಹಲ್ಲುಗಳಿಗೆ ಮತ್ತು ವಸಡುಗಳಿಗೆ ಸಂಬಂಧಪಟ್ಟ ಸಮಸ್ಯೆಗಳ ಪರಿಹಾಕ್ಕಾಗಿ ದಾಳಿಂಬೆ ಹಣ್ಣು ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ. ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿಕೊಂಡು ನೀರಿನಲ್ಲಿ ಒಂದು ಚಮಚ ದಾಳಿಂಬೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ನಂತರ ದಿನಕ್ಕೆ ಎರಡು ಬಾರಿ ಇದರಿಂದ ಬಾಯಿ ಮುಕ್ಕಳಿಸುವುದು ಹಲ್ಲು ಮತ್ತು ವಸಡುಗಳ ಸಮಸ್ಯೆಗೆ ಉತ್ತಮ ಔಷಧಿಯಾಗಿದೆ.
ಗಂಟಲು ಸಮಸ್ಯೆಗೆ ಪರಿಹಾರಸಾಮಾನ್ಯವಾಗಿ ಹಲವರನ್ನು ಕಾಡುವ ಗಂಟಲು ಸಮಸ್ಯೆಗೆ ದಾಳಿಂಬೆ ಮದ್ದಾಗಿದ್ದು, ಗಂಟಲು ನೋವು, ಗಂಟಲು ಕಿರಿಕಿರಿ, ಇತ್ಯಾದಿಗಳಿಗೆ ದಾಳಿಂಬೆ ಹಣ್ಣಿನ ಪುಡಿಯನ್ನು ಬಳಕೆ ಮಾಡಬಹುದು.