ಭಾರತೀಯ ಅಂಚೆ ಇಲಾಖೆಯಲ್ಲಿ ಒಮ್ಮೆ ಡಿಪಾಸಿಟ್ ಮಾಡಿ ಪ್ರತಿ ತಿಂಗಳು ನಿಗದಿತ ಹಣ ಪಡೆಯುವ (Monthly Income scheme) ಒಂದು ಉತ್ತಮವಾದ ಯೋಜನೆ (scheme) ಬಗ್ಗೆ ಇಲ್ಲಿದೆ ಒಂದು ಸಂಪೂರ್ಣ ವರದಿ
ಪೋಸ್ಟ್ ಆಫೀಸ್ Monthly Income scheme:
ಭಾರತ ಸರ್ಕಾರದ ಅಧೀನದ ಅಂಚೆ ಇಲಾಖೆಯಲ್ಲಿ (Post Office) ಈಗ ಬ್ಯಾಂಕುಗಳಲ್ಲಿ ಸಿಗುವ ಎಲ್ಲಾ ಸೇವೆಗಳು ಲಭ್ಯವಿದ್ದು, ಜನರಿಗೆ ಅಂಚೆ ಇಲಾಖೆಯಲ್ಲಿ ಹೂಡಿಕೆಯ ಬಗ್ಗೆ ಹೆಚ್ಚು ಸುರಕ್ಷತೆ ಸಿಗುವುದರ ಜೊತೆಗೆ ಉತ್ತಮ ಆದಾಯದ ಭರವಸೆ ಅಂಚೆ ಇಲಾಖೆಯು ಒದಗಿಸುತ್ತಿದೆ.
ಒಂದುವೇಳೆ ನೀವು ನಿರ್ದಿಷ್ಟ ಹಣ ಹೂಡಿಕೆಯಿಂದ ಪ್ರತಿ ತಿಂಗಳು ಆದಾಯ ಬರುವ ಯಾವುದಾದರೂ ಉತ್ತಮ ಯೋಜನೆಯ ಹುಡುಕಾಟದಲ್ಲಿದ್ದರೆ, ಪೋಸ್ಟ್ ಆಫೀಸ್ ನ ಈ ಮಾಸಿಕ ಆದಾಯ ಯೋಜನೆಯು (Monthly Income Scheme) ಒಂದು ಉತ್ತಮ ಯೋಜನೆ ಎನ್ನಬಹುದು.
ಈ ಯೋಜನೆಯಲ್ಲಿ ನೀವು ಒಮ್ಮೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದಲ್ಲಿ ಪ್ರತಿ ತಿಂಗಳು ನಿರ್ದಿಷ್ಟವಾದ ಬಡ್ಡಿಯ ಆದಾರದ ಮೇಲೆ ಹಣ ಪಡೆಯಬಹುದಾಗಿದ್ದು, ವಿಶೇಷವಾಗಿ ಹಿರಿಯ ನಾಗರಿಕರು, ನಿವೃತ್ತಿಯ ಜೀವನದಲ್ಲಿರುವವರು ಪ್ರತಿ ತಿಂಗಳ ಹಣ ಬಯಸುತ್ತಿರುವವರಿಗೆ ಈ ಯೋಜನೆ ಉತ್ತಮವಾದ ಆಯ್ಕೆಯಾಗಿದೆ.
ಮಾಸಿಕ ಆದಾಯ ಯೋಜನೆಯ ವಿವರಗಳು
ಮಾಸಿಕ ಆದಾಯ ಯೋಜನೆಯಲ್ಲಿ ಒಮ್ಮೆ ಹಣ ಹೂಡಿಕೆ (deposit) ಮಾಡಿದಲ್ಲಿ, ನೀವು ನಂತರ ವಾರ್ಷಿಕವಾಗಿ 7.4% ಬಡ್ಡಿದರದಲ್ಲಿ ಪ್ರತಿ ತಿಂಗಳು ಹಣ ಪಡೆಯಬಹುದಾಗಿದೆ.
ಈ ಯೋಜನೆಯು 5 ವರ್ಷದ ಹೂಡಿಕೆಯ ಅವಧಿ ಹೊಂದಿದ್ದು, ನೀವು ಕನಿಷ್ಠ 1000 ರೂಪಾಯಿಯಿಂದ ಗರಿಷ್ಟ 9 ಲಕ್ಷದ ವರೆಗೆ ಈ ಖಾತೆ ತೆರೆಯಬಹುದಾಗಿದೆ.
ಇನ್ನು ಜಂಟಿ ಖಾತೆ ( Joint account) ಹೊಂದಿದ್ದಲ್ಲಿ 15 ಲಕ್ಷದ ವರೆಗೆ ಹೂಡಿಕೆ ಮಾಡಬಹುದಾಗಿದೆ.
ಮಾಸಿಕ ಆದಾಯದ ಲೆಕ್ಕಾಚಾರ
ಈ ಸ್ಕೀಮ್ ನಲ್ಲಿ ನಿಮ್ಮ ಹಣ ಹೂಡಿಕೆಯ ಒಟ್ಟು ಮೊತ್ತದ ಮೇಲೆ 7.4% ವಾರ್ಷಿಕ ಬಡ್ಡಿದರ ನೀಡಲಾಗುತ್ತದೆ. ಅಂದರೆ,
ನೀವು ಒಮ್ಮೆ 9 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ನೀವು ಪ್ರತಿ ತಿಂಗಳು 5, 550ರೂ. ಪಡೆಯಬಹುದಾಗಿದೆ.
ಇನ್ನು 5 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 3,083 ರೂಪಾಯಿ, 3 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 1,850 ರೂಪಾಯಿ ಪಡೆಯಬಹುದಾಗಿದೆ.
ಈ ಯೋಜನೆಯ ಉಪಯೋಗ
ಈ ಯೋಜನೆಯು ಯಾರು ಪ್ರತಿ ತಿಂಗಳು ನಿರ್ದಿಷ್ಟ ಹಣ ಪಿಂಚಣಿ (pension) ರೀತಿಯಲ್ಲಿ ಪಡೆಯಲು ಬಯಸುತ್ತಾರೋ ಅವರಿಗೆ ಒಂದು ಉತ್ತಮ ಆಯ್ಕೆಯಾಗಿದೆ.
ಬೇರೆ ಯಾವುದೇ ಮಾರುಕಟ್ಟೆ ಅಥವಾ ಹೂಡಿಕೆಯಲ್ಲಿ ಹಣದ ಗ್ಯಾರಂಟಿ ಇಲ್ಲದೆ ಇರುವ ಕಾರಣ ಜನರು ಹೂಡಿಕೆ ಮಾಡಲು ಹಿಂಜರಿಯುತ್ತಾರೆ,
ಆದರೆ ಇದು ಭಾರತ ಸರ್ಕಾರದ ಅಧೀನದ ಯೋಜನೆಯಾಗಿರುವುದರಿಂದ ಒಂದು ಸುಭದ್ರ ಹಾಗೂ ಸುರಕ್ಷೆಯ ಹೂಡಿಕೆ ಯೋಜನೆಯಾಗಿದೆ.
ಇದು ಒಂದು ಸುಲಭ ಪ್ರಕ್ರಿಯೆಯಾಗಿದೆ, ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲೇ ಮಾಡಿಸಬಹುದಾಗಿದ್ದು, ಹಣ ಪಡೆಯುವುದು ಸಹ ನಿಮಗೆ ಸುಲಭವಾಗಿರಲಿದೆ.
ಯೋಜನೆಯ ಷರತ್ತುಗಳು
ಈ ಯೋಜನೆಯು 5 ವರ್ಷಗಳ ನಿರ್ದಿಷ್ಟ (fixed) ಲಾಕ್-ಇನ್ ಅವಧಿ ಇರಲಿದ್ದು, ಈ ಯೋಜನೆಯಲ್ಲಿ ನೀವು 5 ವರ್ಷದವರೆಗೆ ಪ್ರತಿ ತಿಂಗಳು ಹಣ ಪಡೆಯಬಹುದು.
ಇನ್ನು ನೀವು 3 ವರ್ಷದ ಒಳಗೆ ಈ ಯೋಜನೆಯನ್ನು ಸ್ಥಗಿತ ಗೊಳಿಸಬಯಸಿದರೆ ನಿಮ್ಮ ಹೂಡಿಕೆಯ ಮೊತ್ತದ ಮೇಲೆ 2% ದಂಡ ವಿಧಿಸಲಾಗುತ್ತದೆ.
3 ರಿಂದ 4 ವರ್ಷದ ಒಳಗೆ ನಿಮ್ಮ ಹೂಡಿಕೆ ಹಣ ವಾಪಾಸು ಪಡೆಯಲು ಬಯಸಿದರೆ ನಿಮ್ಮ ಒಟ್ಟು ಹೂಡಿಕೆಯ (fixed deposit) ನಲ್ಲಿ 1% ಹಣ ಕಡಿತಗೊಳಿಸಿ ನಿಮಗೆ ಉಳಿದ ಹಣ ನೀಡಲಾಗುತ್ತದೆ
Monthly income scheme ಖಾತೆ ತೆರೆಯುವುದು ಹೇಗೆ?
ನೀವು ಈ ಪೋಸ್ಟ್ ಆಫೀಸ್ ನ MIS ಖಾತೆ ತೆರೆಯಲು ಬಯಸಿದರೆ ನೀವು ನಿಮ್ಮ ಹತ್ತಿರದ ಅಂಚೆಕಚೇರಿ ಯಲ್ಲೇ ಈ ಖಾತೆಯನ್ನು ತೆರೆದು ಈ ಯೋಜನೆ ಪ್ರಾರಂಭಿಸಬಹುದಾಗಿದೆ.
ಅಂಚೆ ಕಚೇರಿಯಲ್ಲಿ ನೀಡಲಾಗುವ ಫಾರ್ಮ್ ತುಂಬಿಸಿ, ನಿಮ್ಮ ಭಾವಚಿತ್ರ, ಗುರುತಿನ ಚೀಟಿ, ಹಾಗೂ ನಗದು ಅಥವಾ ಚೆಕ್ ರೂಪದಲ್ಲಿ ನಿಮ್ಮ ಹಣ ಪಾವತಿಸಿ ನೀವು ಈ ಯೋಜನೆಯ ಖಾತೆ ತೆರೆಯಬಹುದಾಗಿದೆ.
ಒಟ್ಟಾರೆ ನಿಮ್ಮ ಬಳಿ ಇರುವ ಹಣದಿಂದ ಪ್ರತಿ ತಿಂಗಳು ನಿರ್ದಿಷ್ಟ ಆದಾಯ ಬರುವ ಯೋಜನೆಯನ್ನು ಬಯಸುತ್ತಿದ್ದರೆ, ಒಂದು ವಿಶ್ವಾಸಾರ್ಹ ಹೂಡಿಕೆ ಹಾಗೂ ಸುರಕ್ಷತೆಯ ಆದಾಯದ ಭದ್ರತೆಯನ್ನು ಒದಗಿಸುವ ಯೋಜನೆಯನ್ನು ಹುಡುಕುತಿದ್ದಲ್ಲಿ ಈ ಯೋಜನೆಯು ಒಂದು ಉತ್ತಮ ಆಯ್ಕೆ ಆಗಿರಲಿದೆ.
ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಊರಿನ ಅಂಚೆ ಕಚೇರಿ (Post Office) ಗೆ ಭೇಟಿ ನೀಡಿ ಪಡೆಯಬಹುದಾಗಿದೆ,
ಅಥವಾ ಅಂಚೆ ಇಲಾಖೆಯ ಅಧಿಕೃತ ವಿಳಾಸ indiapost.gov.in ನಲ್ಲಿ ವಿವರವನ್ನು ಪಡೆಯಬಹುದಾಗಿದೆ.