ವಾಷಿಂಗ್ಟನ್: ವಲಸಿಗರ ವಿಚಾರದಲ್ಲಿ ಅಮೆರಿಕ ಕಠಿಣ ನಿಲುವು ತಳೆದಿರುವ ಅಮೆರಿಕ ಮತ್ತೆ ಹೊಸ ನಿಯಮವೊಂದನ್ನು ಜಾರಿ ಮಾಡಿದ್ದು, ಯೆಹೂದಿ ಸಮುದಾಯವನ್ನು ನಿಂದಿಸುವವರಿಗೆ ವಿಸಾ ನೀಡದಿರಲು ನಿರ್ಧರಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಯಾರಾದರೂ ಯೆಹೂದಿಗಳ ವಿರುದ್ಧ ಪೋಸ್ಟ್ ಹಾಕಿದರೆ ಅಂಥವರಿಗೆ ವೀಸಾ ಹಾಗೂ ಗ್ರೀನ್ ಕಾರ್ಡ್ ನೀಡುವುದಿಲ್ಲ ಎಂದು ತಿಳಿಸಿದೆ. ಈ ಆದೇಶ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ವಲಸಿಗರನ್ನು ಎಚ್ಚರಿಸಿದೆ.ವಿದ್ಯಾರ್ಥಿ ವೀಸಾ ಸೇರಿದಂತೆ ಗ್ರೀನ್ ಕಾರ್ಡ್ ಅರ್ಜಿದಾರರ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ನಿಗಾ ವಹಿಸುತ್ತೇವೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ವಿಭಾಗ ಸ್ಪಷ್ಟಪಡಿಸಿದೆ.
ಉಗ್ರ ಸಂಘಟನೆಗಳು ಎಂದು ಅಮೆರಿಕ ವರ್ಗೀಕರಿಸಿದ ಹಮಾಸ್, ಪ್ಯಾಲಿಸ್ತೇನಿಯನ್ ಇಸ್ಲಾಮಿಕ್ ಜಿಹಾದ್, ಲೆಬನಾನ್‌ನ ಹೆಜ್ಬುಲ್ಲಾ, ಯೆಮೆನ್‌ನ ಹೂತಿಗಳಿಗೆ ಬೆಂಬಲ ಕೊಟ್ಟರೆ ಅದನ್ನು ಯೆಹೂದಿ ವಿರೋಧಿ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದೆ.ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವವರಿಗೆ ಅಮೆರಿಕದಲ್ಲಿ ಜಾಗವಿಲ್ಲ. ಈಗಾಗಲೇ ಅಮೆರಿಕದಲ್ಲಿ ಇರುವ ವಲಸಿಗರು, ಯೆಹೂದಿಗಳ ವಿರುದ್ಧ ಪೋಸ್ಟ್ ಮಾಡಿದರೆ ಅವರ ವೀಸಾ ರದ್ದಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.