ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಎನ್.ಐ.ಎ ದಾಳಿ ನಡೆದಿದೆ. ಸುಳ್ಯ ಹಾಗು ಪುತ್ತೂರಿನಲ್ಲಿ ಈ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿ ಅಬುಬ್ನಕ್ಕರ್ ಸಿದ್ಧೀಕ್ ಎನ್ನುವಾತನ ಪತ್ನಿಯ ಸಹೋದರ ಉಮ್ಮರ್ ಅವರ ಮನೆ ಗೆ ಎನ್ ಐಎ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಉಮ್ಮರ್ ಶಿವಮೊಗ್ಗದ ಮಸೀದಿಯೊಂದರ ಧರ್ಮಗುರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರವೀಣ್ ಹತ್ಯೆಯ ನಾಪತ್ತೆಯಾಗಿರುವ ಮೂವರು ಆರೋಪಿಗಳಲ್ಲಿ ಓರ್ವನಾದ ಅಬುಬ್ಬಕ್ಕರ್ ಸಿದ್ಧೀಕ್, ಉಮರ್ ಫಾರೂಕ್, ಮಸೂದ್ ಅಗ್ನಾಡಿ ಇನ್ನುಳಿದ ಆರೋಪಿಗಳು. ಸುಳ್ಯದಲ್ಲೂ ಆರೋಪಿಯೋರ್ವನ ಮನೆಗೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.