ಚಿತ್ರದುರ್ಗ : ನಗರದ ಕಬೀರಾನಂದ ನಗರದಲ್ಲಿನ ಶ್ರೀ ಸದ್ಗುರು ಕಬೀರಾನಂದಾಶ್ರಮದಲ್ಲಿ ನಡೆಯುವ 96ನೇ ಮಹಾ ಶಿವರಾತ್ರಿ ಸಪ್ತಾಹದ ಅಂಗವಾಗಿ ರೂಪುರೇಷೆಗಳ ಕುರಿತ ಭಕ್ತಾಧಿಗಳ ಪೂರ್ವಬಾವಿ ಸಭೆಯನ್ನು ಡಿ.27ರ ಶನಿವಾರ ಸಂಜೆ ಶ್ರೀ ಸದ್ಗುರು ಕಭೀರಾನಂದಾಶ್ರಮ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಮಹಾ ಶಿವರಾತ್ರಿ ಉತ್ಸವ ಸಮಿತಿಯ ಕಾರ್ಯದರ್ಶಿಗಳಾದ ವಿ.ಎಲ್.ಪ್ರಶಾಂತ್ರವರು ಕಳೆದ ವರ್ಷದ 95ನೇ ಮಹಾ ಶಿವರಾತ್ರಿ ಮಹೋತ್ಸವದ ಯಶಸ್ವಿಗೆ ಸಹಕಾರ ನೀಡಿದವರನ್ನು ನೆನೆದು, 96ನೇ ಮಹಾ ಶಿವರಾತ್ರಿ ಮಹೋತ್ಸವದ ಯಶಸ್ವಿಗೆ ಸಹಕಾರವನ್ನು ಕೋರಿ 96ನೇ ಶಿವನಾಮ ಸಪ್ತಾಹವೂ 2026ನೇ ಫೆಭ್ರವರಿ 9 ರಿಂದ ಪ್ರಾರಂಭವಾಗಿ ಫೆ, 15ರವರೆಗೆ ನಡೆಯಲಿದೆ. ವೇದಿಕೆ ಕಾರ್ಯಕ್ರಮವೂ ಫೆ, 11 ರಿಂದ ಪ್ರಾರಂಭವಾಗಲಿದ್ದು, ಫೆ. 15ರವರೆಗೆ ನಡೆಯಲಿದ್ದು, ಪ್ರತಿ ದಿನ ಸಂಜೆ 6.30ರಿಂದ ನಾಡಿನ ವಿವಿಧ ಮಠಾಧಿಶರು, ಸಾಹಿತಿಗಳು, ಗಣ್ಯರು, ಆಗಮಿಸಿ ತಮ್ಮ ಚಿಂತನಾನುಡಿಗಳನ್ನು ಆಡಲಿದ್ದಾರೆ. ಫೆ.9ರ ಸೋಮವಾರ ಕಳಶ ಸ್ಥಾಪನೆ, ಶ್ರೀ ಗುರು ಕರ್ತೃ ಗದ್ದಿಗೆಯ ಮೂರ್ತಿಗೆ ರುದ್ರಾಭಿಷೇಕ ಶಿವಮಹಿಮ್ನಾ ಸ್ತೋತ್ರದೊಂದಿಗೆ ಶಿವನಾಮ ಸಪ್ತಾಹ ಪ್ರಾರಂಭವಾಗಲಿದೆ. ಫೆ. 15ರ ಭಾನುವಾರ ಶ್ರೀ ಶಿವಲಿಂಗಾನಂದ ಶ್ರೀಗಲ ಪಲ್ಲಕ್ಕಿನ ಉತ್ಸವ ಜಾನಪದ ಕಲಾಮೇಳ ನಡೆಯಲಿದ್ದು ಫೆ. 16ರ ಸೋಮವಾರ ಸಂಜೆ ಕೌದಿ ಪೂಜೆಯೊಂದಿಗೆ ಶಿವನಾಮ ಸಪ್ತಾಹ ಸಮಾಪ್ತಿಯಾಗಲಿದೆ ಎಂದರು.
ಬಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವಿರೇಶ್ ಮಾತನಾಡಿ, ಚಿತ್ರದುರ್ಗ ನಗರದಲ್ಲಿ ಹಲವಾರು ಮಠಗಳು ಇದ್ದು ಇಲ್ಲಿ ಒಂದೊಂದು ಮಠಗಳು ಒಂದೊಂದು ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಹೆಸರು ಮಾಡಿದೆ ಬೃನ್ಮಹಠದಿಂದ ಶರಣ ಸಂಸ್ಕøತಿ ಉತ್ಸವ, ಕಬೀರಾನಂದಾಶ್ರಮದಿಂದ ಮಹಾ ಶಿವರಾತ್ರಿ ಮಹೋತ್ಸವ ತರಳಬಾಳು ಮಠದಿಂದ ತರಳಬಾಳು ಹುಣ್ಣಿಮೆ ಸೇರಿದಂತೆ ವಿವಿಧ ಜಾತಿಯ ಮಠಗಳು ವಿವಿದ ರೀತಿಯ ಕಾರ್ಯಕ್ರಮವನ್ನು ಮಾಡುತ್ತವೆ. ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಕ್ಕೆ ಆನಂದ ಸಂತೃಪ್ತಿ ಸಿಗುತ್ತದೆ. ಮಠದಲ್ಲಿ ಮಹಾ ಶಿವರಾತ್ರಿ ಮಹೋತ್ಸವದ ವಿಶೇಷ ಕೌದಿಪೂಜೆ ಯಾಗಿದೆ ನಾನು ಎರಡು ಮಠಗಳ ಶಿಷ್ಯನಾಗಿದ್ದೇನೆ ಎಂದರು.
ಹಿರಿಯ ಪತ್ರಕರ್ತರಾದ ಉಜ್ಜನಪ್ಪ ಮಾತನಾಡಿ ಹಿಂದೂ ಸಮುದಾಯದಲ್ಲಿ ತಿಂಗಳಿಗೆ ಹಬ್ಬಗಳಿಗೆ ಏನೂ ಕೂರತೆ ಇಲ್ಲ, ಶಿವರಾತ್ರಿ ನಮ್ಮ ಹಿಂದೂಗಳಿಗೆ ದೊಡ್ಡ ಹಬ್ಬವಾಗಿದೆ. ಶಿವರಾತ್ರಿ ಆಚರಣೆಯನ್ನು ಮಾಡುವುದರ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ನಮ್ಮಲ್ಲಿನ ಆನಾಚಾರ, ಅನಿಷ್ಠಗಳು ದೂರವಾಗಬೇಕಿದೆ ಇವುಗಳನ್ನು ಮಹಾ ಶಿವರಾತ್ರಿಯಲ್ಲಿ ವೀಲಿನ ಮಾಡಬೇಕಿದೆ ಇದರಿಂದ ನಮ್ಮ ಮನಸ್ಸಿಗೂ ನೆಮ್ಮದಿ ಉಂಟಾಗುತ್ತದೆ ಎಂದರು.
ವೀರಶೈವ ಸಮಾಜದ ಮುಖಂಡರಾದ ಕೆ.ಇ.ಬಿ.ಷಣ್ಮುಖಪ್ಪ ಮಾತನಾಡಿ, ನಾನು ಚಿಕ್ಕನಿಂದಲೂ ಸಹಾ ಈ ಆಶ್ರಮದಲ್ಲಿ ಮಹಾ ಶಿವರಾತ್ರಿ ನಡೆಯುತ್ತಿದ್ದು ಇದರಲ್ಲಿ ಭಾಗವಹಿಸುವುದರ ಮೂಲಕ ಧನ್ಯರಾಗಿದ್ದೆವು, ಶ್ರೀಗಳು ನೀಡಿದ ಆದೇಶವನ್ನು ಪಾಲಿಸುವುದಾಗಿ ತಿಳಿಸಿದರು.
ಜೆಡಿಎಸ್ ಗೋಪಾಲಸ್ವಾಮಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿನ ಮಠಗೂ ಜಾತಿ ಮಠಗಳಾಗಿದ್ದರೆ ಕಬೀರಾನಂದಾಶ್ರಮ ಜಾತ್ಯಾತೀತ ಮಠವಾಗಿದೆ ಇಲ್ಲಿ ಜಾತಿ ಎಂಬುದು ಇಲ್ಲ ಎಲ್ಲರೂ ಸಹಾ ಬಂದು ಶ್ರೀಗಳ ಆರ್ಶೀವಾದವನ್ನು ಪಡೆಯುತ್ತಾರೆ. ಶ್ರೀಗಳಿಗೂ ಸಹಾ ಜಾತಿಯ ಬೇದ ಇಲ್ಲ ಎಲ್ಲರಿಗೂ ಸಹಾ ಆರ್ಶಿವಾದವನ್ನು ನೀಡುತ್ತಾರೆ. 96ನೇ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಸಾದ್ಯವಾದಷ್ಟು ಸ್ಥಳಿಯವಾಗಿ ಇರುವವರನ್ನು ಕರೆಯಿರಿ ಇದರಿಂದ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಹೊರಗಿನವರು ಕರೆದರು ಬರುತ್ತಾರೋ ಇಲ್ಲವೂ ಎಂದು ಕಾಯಬೇಕಾಗುತ್ತದೆ ಎಂದ ಅವರು. ಕಳೆದ 95 ವರ್ಷಗಳಿಂದ ನಿರಂತರವಾಗಿ ಮಹಾ ಶಿವರಾತ್ರಿ ಮಹೋತ್ಸವ ನೆಡೆಯುತ್ತಿದೆ, ಇಲ್ಲಿ ಎಲ್ಲರ ಸಹಾಯ ಮತ್ತು ಸಹಕಾರದಿಂದ ಮಹೋತ್ಸವ ನಿಲ್ಲದೆ ನಡೆಯುತ್ತಿದೆ ಎಂದರು.
ಈ ಪೂರ್ವಬಾವಿ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ, ಮಹಾ ಶಿವರಾತ್ರಿ ಮಹೋತ್ಸವ ವರ್ಷದಿಂದ ವರ್ಷಕ್ಕೆ ಯಾವುದೇ ತೊಂದರೆ ಇಲ್ಲದೆ ನಡೆಯುತ್ತವೆ, ಕಬೀರಜ್ಜ ಎಲ್ಲವನ್ನು ಸಾಂಗವಾಗಿ ನಡೆಸುತ್ತಾರೆ. ಇಲ್ಲಿ ವಂತಿಕೆಗಿಂತ ಹೃದಯ ಶ್ರೀಮಂತಿಕೆ ಅತಿ ಮುಖ್ಯವಾಗಿದೆ. ಕಾರ್ಯಕ್ರಮ ನಾವು ಮಾಡಬಹುದು ಆದರೆ ಜನತೆ ಕಾರ್ಯಕ್ರಮಕ್ಕೆ ಬರುವುದು ಅತಿ ಮುಖ್ಯವಾಗಿದೆ, ಇಲ್ಲಿ ಭಾಗವಹಿಸುವುದರಿಂದ ಶಿವನ ಸ್ಮರಣೆಯನ್ನು ಮಾಡುವುದರ ಮೂಲಕ ನಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕಿದೆ. ಇಲ್ಲಿಗೆ ಕಬೀರಾನಂದರು ಮಠವನ್ನು ಮಾಡಲು ಬಂದವರಲ್ಲ ಗೋಶಾಲೆಯನ್ನು ನಿರ್ಮಾಣ ಮಾಡಿ ಗೋವುಗಳನ್ನು ಸಾಕಲು ಬಂದವರುನ ತದ ನಂತರ ನಿಲ್ಲಲು ನೆಲಯನ್ನಾಗಿ ಇಲ್ಲಿ ಸಣ್ಣದಾಗಿ ಕುಟೀರವನ್ನು ನಿರ್ಮಾಣ ಮಾಡಿಕೊಂಡವರು ಇದು ಈಗ ಈ ಮಟ್ಟಕ್ಕೆ ಬೆಳೆದಿದೆ ಎಂದರು.
ಕಾರ್ಯಕ್ರಮದಲ್ಲಿ ಆಗಮಿಸಿದ್ದ ಮಂಜುನಾಥ್ಗುಪ್ತ, ಶ್ರೀಮತಿರೇಖಾ, ಧರ್ಮಪ್ರಸಾದ್, ನಗರಸಭೆಯ ಸದಸ್ಯರಾದ ವೆಂಕಟೇಶ್, ವಿಜಯಕುಮಾರ್, ವೀರಣ್ಣ, ಓಂಕಾರ್, ರಾಮಮೂರ್ತಿ, ರಾಜಶೇಖರಪ್ಪ ಸೇರಿದಂತೆ ಇತರೆ ಭಕ್ತಾಧಿಗಳು ಆಗಮಿಸಿ ಸಲಹೆ, ಸಹಕಾರವನ್ನು ನೀಡಿದರು. ಗಣಪತಿಶಾಸ್ತ್ರಿ, ತಿಪ್ಪೇಸ್ವಾಮಿ, ನಿರಂಜನ, ಜಯ್ಯಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.
ಸುಬ್ರಾಯ್ ಭಟ್ಟರು ವೇದಘೋಷಗಳನ್ನು ಮಾಡಿದರೆ ಶ್ರೀಮತಿ ಜ್ಯೋತಿ ಪ್ರಾರ್ಥಿಸಿದರು ಮುರುಗೇಶ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.































